ಎಕ್ಸಲೆಂಟ್ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

Excellent performance by the students of the excellent school
ವಿಜಯಪುರ ನಗರದ ಪದ್ಮಾಂಜಲಿ ಶಾಲೆಯ ಸಹಯೋಗದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಕ್ಸಲೆಂಟ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಬಾಚಿಕೊಂಡರು.
Published on

ವಿಜಯಪುರ: ನಗರದ ಪದ್ಮಾಂಜಲಿ ಶಾಲೆಯ ಸಹಯೋಗದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಕ್ಸಲೆಂಟ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಬಾಲಕ, ಬಾಲಕಿಯರ ವಾಲಿಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಡೆತಡೆ ಓಟದಲ್ಲಿ ತೇಜಸ್ವಿನಿ ಮಾಳಬಾಗಿ ಪ್ರಥಮ, 400 ಮೀಟರ್ ಹಾಗೂ 200 ಮೀಟರ್ ಓಟದಲ್ಲಿ ಭವಾನಿ ಭೋವಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಲಕಿಯರ ರಿಲೆ ತಂಡ ದ್ವಿತೀಯ, ಗುಂಡು ಎಸೆತದಲ್ಲಿ ಪ್ರೇಮಾ ರಾಠೋಡ ತೃತೀಯ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮೆರೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಎಕ್ಸಲೆಂಟ್ ಸಂಸ್ಥೆ ಚೇರಮನ್ ಬಸವರಾಜ ಕೌಲಗಿ, ಸಂಸ್ಥೆಯ ಗೌರ ಸದಸ್ಯ ರಾಜಶೇಖರ ಕೌಲಗಿ, ನಿರ್ದೇಶಕ ಮಂಜುನಾಥ ಕೌಲಗಿ, ಮುಖ್ಯಗುರು ಎಂ.ಐ. ಬಿರಾದಾರ, ದೈಹಿಕ ಶಿಕ್ಷಕ ಆರ್.ಕೆ. ದೇಶಪಾಂಡೆ, ರೇಖಾ ಮಾಳಿ, ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net