ಎಕರೆಗೆ 15 ಕ್ವಿಂಟಾಲ್ ರಾಗಿ ಖರೀದಿಸಿ : ರೈತಸಂಘ ಮನವಿ

33
Published on

ಮಾಗಡಿ: ಪ್ರತಿ ಎಕರೆಯಿಂದ 15 ಕ್ವಿಂಟಾಲ್ ರಾಗಿ ಖರೀದಿಸಲು ಸರ್ಕಾರ ಮುಂದಾಗಬೇಕು ಎಂದು ರೈತಸಂಘದಿಂದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಬಿ.ಜಿ.ಶ್ರೀನಿವಾಸ್‌ಗೆ ಶನಿವಾರ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು ಶೇ.90 ರೈತರು ರಾಗಿ ಬೆಳೆಯನ್ನೆ ಅವಲಂಬಿಸಿದ್ದಾರೆ. 5 ಎಕರೆ ವಿಸ್ತೀರ್ಣದಲ್ಲಿ ಸಣ್ಣ ರೈತರು ಬೆಳೆದ 20 ಕ್ವಿಂಟಾಲ್ ರಾಗಿ ಖರೀದಿಸುತ್ತಿರುವುದರಿಂದ ಹೆಚ್ಚು ಜಮೀನಿನಲ್ಲಿ ಬೆಳೆದ ರಾಗಿ ಖರೀದಿಸದಿರುವ ನಿರ್ಧಾರ ಸರಿಯಲ್ಲ. ಎಕರೆಗೆ 10 ರಿಂದ 15 ಕ್ವಿಂಟಾಲ್ ಖರೀದಿಗೆ ಮುಂದಾಗಬೇಕು. ಕ್ವಿಂಟಾಲ್ ರಾಗಿಗೆ 3,700 ರೂಪಾಯಿ ಬದಲಾಗಿ 5 ಸಾವಿರ ರೂಪಾಯಿ ಬೆಂಬಲ ಬೆಲೆ ನೀಡಬೇಕು ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಒತ್ತಾಯಿಸಿದರು.

ಜ.1 ರಿಂದ ರಾಗಿ ಖರೀದಿಸಲು ರೈತರಿಂದ ಪಹಣಿ ಪಡೆದು ಐಎಫ್‌ಸಿ ಕೋಡ್ ನೀಡಲಾಗುತ್ತಿದೆ, ೆಬ್ರವರಿ ತಿಂಗಳಿಂದ ರೈತರಿಂದ ರಾಗಿ ಖರೀದಿಸಲು ಸರ್ಕಾರ ಚಿಂತಿಸಿದ್ದು ರಾಗಿ ಕೇಂದ್ರದ ಬಳಿ ರೈತರಿಗೆ ಶೌಚಗೃಹ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಕಳೆದ ಬಾರಿ ನೂಕುನುಗ್ಗಲು ನಡೆದ ಕಾರಣ ರೈತರಿಗೆ ತೊಂದರೆಯಾಗಿದೆ, ಈ ಬಾರಿ ಕರೊನಾ ಹೆಚ್ಚಿರುವುದರಿಂದ ಪ್ರತಿ ಗ್ರಾಮಗಳಿಗೆ ಗ್ರಾಮಲೆಕ್ಕಿಗರು ಭೇಟಿ ನೀಡಿ ರೈತರಿಗೆ ಐಎಫ್‌ಸಿ ಕೋಡ್ ನೀಡಿ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್ ಮನವಿ ಸ್ವೀಕರಿಸಿ ಮಾತನಾಡಿ, ರೈತರಿಂದ ಹೆಚ್ಚು ರಾಗಿ ಖರೀದಿಸುವ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಜಿಲ್ಲಾ ಉಪಾಧ್ಯಕ್ಷ ಪಟೇಲ್ ಹನುಮಂತಯ್ಯ, ತಾಲೂಕು ಯುವ ಘಟಕ ಅಧ್ಯಕ್ಷ ರವಿಕುಮಾರ್, ಯುವ ಕಾರ್ಯದರ್ಶಿ ಕಾಂತರಾಜು, ಮುಖಂಡರಾದ ಪುಟ್ಟಯ್ಯ, ಶಿವಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net