ಎಐಸಿಸಿ ಅಧ್ಯಕ್ಷ ಖರ್ಗೆ ವಿರುದ್ಧ ಆಕ್ರೋಶ

Umesh Jadhav
Published on

ಕಲಬುರಗಿ: ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆ ಎರಡು ವರ್ಷಗಳಿಂದ ನಡೆಯದಿರುವುದಕ್ಕೆ ಸಂಸದ ಡಾ.ಉಮೇಶ ಜಾಧವ್ ಬೇಸರ ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳಿಂದ ನಡೆಯದ ದಿಶಾ ಸಭೆ ಕೊನೆಗೆ ಅ.೨೭ರಂದು ನಿಗದಿಯಾಗಿದ್ದರೂ ದಿಢೀರ್ ಮುಂದೂಡಿರುವುದು ಸೋಜಿಗದ ಸಂಗತಿ. ದಿಶಾ ಸಭೆಗೆ ಸಂಸದರೇ ಅಧ್ಯಕ್ಷರು. ಆದರೆ ನಿಯಮದಂತೆ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ದಿಶಾ ಸಮಿತಿ ಅಧ್ಯಕ್ಷರಾಗಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಎರಡು ವರ್ಷದಿಂದ ಸಭೆ ನಡೆಯದ್ದರಿಂದ ಜಿ¯್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆ ಮತ್ತು ಕಾಮಗಾರಿ ಯಾವ ಹಂತದಲ್ಲಿವೆ?, ಕಾಮಗಾರಿ ಮುಗಿಸುವಲ್ಲಿ ಕೇಂದ್ರದ ಪಾತ್ರ ಏನೆಂಬುದನ್ನು ಅರಿಯಲು ದಿಶಾ ಸಭೆಯೇ ಸೂಕ್ತ ಪರಿಹಾರ. ದಿಶಾ ಸಭೆ ಕರೆದಲ್ಲಿ ಎಲ್ಲ ಅಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಆದರೆ ಸಭೆ ನಡೆಸಲು ದೊಡ್ಡ ನಾಯಕರಿಗೆ ಪುರುಸೊತ್ತು ಸಿಗುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಎಂಬುದು ಹಳಿ ತಪ್ಪುತ್ತಿದೆ. ಅಧಿಕಾರಿಗಳಿಗೆ ಹೆದರಿಕೆ ಇಲ್ಲವಾಗಿದೆ. ಜನಸಾಮಾನ್ಯರು ತಮ್ಮೆದುರು ಅಳಲು ತೋಡಿಕೊಳ್ಳುತ್ತಾರೆ. ಧ್ವನಿ ಎತ್ತಬೇಕೆಂದರೆ ಸಭೆಯೇ ಕರೆಯುತ್ತಿಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ಪುರಸ್ಕೃತ ಕಾಮಗಾರಿಗಳನ್ನು ಪರಿಶೀಲಿಸುವ ದಿಶಾ ಸಭೆ ಪಶ್ಚಿಮ ಬಂಗಾಳದಲ್ಲಿ ನಡೆಯುವುದಿಲ್ಲ. ಕಲಬುರಗಿ ಜಿಲ್ಲೆಯದ್ದೂ ಅದೇ ಪರಿಸ್ಥಿತಿ ಇದೆ. ದಿಶಾ ಸಭೆ ಮೂರು ತಿಂಗಳಿಗೊಮ್ಮೆ ನಡೆಯಬೇಕು. ೧೫ ದಿನ ಮೊದಲೇ ಜಿಪಂ ಸಿಇಒ ನೋಟಿಸ್ ನೀಡಬೇಕು. ಆದರೆ ನಿಗದಿಯಂತೆ ಸಭೆ ನಡೆಯದಿರುವುದಕ್ಕೆ ಸಂಬAಧಿತರಿಗೆ ದೂರು ಸಲ್ಲಿಸುವುದಾಗಿ ಡಾ.ಜಾಧವ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net