

ಮೈಸೂರು: ಕೃತಕಬುದ್ಧಿಮತ್ತೆ(ಎಐ) ತಂತ್ರಜ್ಞಾನಕ್ಕಿರುವ ಮಿತಿಯೇ ನಮ್ಮ ಅಧ್ಯಯನದ ವಸ್ತುವಾಗಬೇಕು. ಆ ದೃಷ್ಟಿಯಲ್ಲಿ ನಮ್ಮ ಆಲೋಚನಾ ಪ್ರಕ್ರಿಯೆ ನಡೆಯಬೇಕು ಎಂದು ಚಲನಚಿತ್ರ, ರಂಗಭೂಮಿ ನಟ ಪ್ರಕಾಶ್ ಬೆಳವಾಡಿ ಹೇಳಿದರು.
ಸಿದ್ಧಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನಲ್ಲಿ (ಕಾವಾ) ಶನಿವಾರ ಆಯೋಜಿಸಿದ್ದ ಕುಂಚ ಕಾವ್ಯ ಸಾಂಸ್ಕ ೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಕ್ಷೇತ್ರದಲ್ಲೂ ಎಐ ತಂತ್ರಜ್ಞಾನಕ್ಕಿರುವ ಮಿತಿಂುನ್ನು ಗುರುತಿಸಿಕೊಂಡು ಅದಕ್ಕೂ ಮೀರಿದ ಜ್ಞಾನ ಸಂಪಾದಿಸಿಕೊಳ್ಳಬೇಕು. ಎಲ್ಲ ಕ್ಷೇತ್ರಕ್ಕೂ ಕಾಲಿಡುತ್ತಿರುವ ಈ ಎಐಯಿಂದ ಗುಣಾತ್ಮಕವಾದ ಕೆಲಸವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಅಧ್ಯಯನದಲ್ಲಿ ಸೃಜಶೀಲತೆಯಿಂದ ತೊಡಗಿಸಿಕೊಳ್ಳಬೇಕಿದೆ ಎಂದರು.
ಎಐ ತಂತ್ರಜ್ಞಾನವು ಈವರೆಗೆ ವಿಶ್ವದಲ್ಲಿ ನಡೆದಿರುವ ಪ್ರಯೋಗಗಳು, ಪ್ರಯತ್ನಗಳು ಸೇರಿದಂತೆ ಎಲ್ಲ ವಾಹಿತಿ ಕ್ರೂಡೀಕರಿಸಿ ಫಲಿತಾಂಶ ಒದಗಿಸುತ್ತದೆ. ಇದರಿಂದ ತ್ವರಿತವಾಗಿ ಕೆಲಸವಾದರೂ ಗುಣಾತ್ಮಕ ಕೆಲಸವಾಗಲ್ಲ. ಎಐ ತಂತ್ರಜ್ಞಾನಕ್ಕೆ ಆಯ್ಕೆ ವಾಡಿಕೊಂಡ ವಿಷಯದಲ್ಲಿ ಮುಂದೆ ಏನಾಗುತ್ತದೆ. ಸಾಧಕ ಬಾಧಕಗಳೇನು ಎಂಬುದನ್ನು ಸ್ವತಃ ಮೌಲ್ಯವಾಪನ ವಾಡಿ ಹೇಳಲು ಸಾಧ್ಯವಾಗಲ್ಲ ಎಂದರು.
ತಂತ್ರಜ್ಞಾನ ಬೆಳವಣಿಗೆ ಮನುಷ್ಯನಿಗಿರುವ ಅವಕಾಶ ಕಿತ್ತುಕೊಳ್ಳುತ್ತವೆ. ಆದರೆ, ಸಂಪೂರ್ಣವಾಗಿ ಮನುಷ್ಯನ ಕೆಲಸ ವಾಡಲು ಯಾವ ತಂತ್ರಜ್ಞಾನದಿಂದಲೂ ಸಾಧ್ಯವಿಲ್ಲ. ತಂತ್ರಜ್ಞಾನದ ಈ ಹಿನ್ನಡೆಯನ್ನೇ ಬಂಡವಾಳ ವಾಡಿಕೊಂಡು ಜ್ಞಾನ ವಿಸ್ತರಣೆ ವಾಡಿಕೊಳ್ಳಬೇಕು ಎಂದು ತಿಳಿಸಿದರು.
ಓದುತ್ತಿರುವ ಕೋರ್ಸ್‌ನಿಂದ ಏನು ಪ್ರಂೋಜನ ಎಂದು ಕೇಳಿದರೆ ಅದು ತಪ್ಪಾಗುತ್ತದೆ. ಆಯ್ದುಕೊಂಡ ಕೋರ್ಸ್ ಅನ್ನು ಬಳಕೆ ವಾಡಿಕೊಂಡು ಯಾವ ರೀತಿ ಬೆಳೆಯಬಲ್ಲೆ ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಹಾಕಬೇಕು ಎಂದರು.
ತುಮಕೂರಿನ ದೃಶ್ಯ ಕಲಾವಿದ ಎಂ.ಎಸ್.ಉಮೇಶ್, ಕಾವಾ ಡೀನ್ ಎ.ದೇವರಾಜು, ಆಡಳಿತಾಧಿಕಾರಿ ನಿರ್ಮಲಾ ಮಠಪತಿ, ಗ್ರಾಫಿಕ್ ವಿಭಾಗದ ಮುಖ್ಯಸ್ಥ ಎ.ಪಿ. ಚಂದ್ರಶೇಖರ್ ಇನ್ನಿತರರಿದ್ದರು.