ಎಐಎಂಐಎಂ ನಿಂದ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

IMG_20240629_105351
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಕೇವಲ ಮೂವರು ಸದಸ್ಯರನ್ನು
ಹೊಂದಿರುವ ಎಐಎಂಐಎಂ ಪಕ್ಷ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ನಾಮ ಪತ್ರ ಸಲ್ಲಿಸಿದೆ.

77 ನೇ ವಾರ್ಡ್ ಸದಸ್ಯೆ ಹುಸೇನಬಿ ನಾಲವತ್ತವಾಡ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಮೇಯರ್ ಸ್ಥಾನ ಹಿಂದುಳಿವ ವರ್ಗಕ್ಕೆ‌ ಹಾಗೂ ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿ ಇಲ್ಲದ ಕಾರಣ ಎಐಎಂಐಎಂ ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲ.

ಮೇಯರ್ ಉಪ ಮೇಯರ್ ಆಯ್ಕೆ ಚುನಾವಣೆ ಮಧ್ಯಾಹ್ನ ೧ ಗಂಟೆಗೆ ನಿಗದಿಯಾಗಿದೆ. ಕಾಂಗ್ರೆಸ್ ಪಕ್ಷ ನಮ್ಮ ಬೆಂಬಲ ಕೋರಿತ್ತು. ಆದರೆ, ಮಹಾನಗರದಲ್ಲಿ ನಮ್ಮದು ಒಂದು ಪಕ್ಷ ವಿದೆ. ನಮ್ಮ ಅಸ್ತಿತ್ವವೂ ಇದೆ. ಅದಕ್ಕೆ ಸ್ಪರ್ಧೆ ಮಾಡಿದ್ದೇವೆ ಎಂದು ಎಐಎಂಐಎಂ ಜಿಲ್ಲಾಧ್ಯಕ್ಷ ನಜೀರ ಅಹ್ಮದ್ ಹೊನ್ಯಾಳ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net