

ಚಿಕ್ಕೋಡಿ: ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಾಧನಗಳ ಸಹಾಯ ಪಡೆದು ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಬೇಕು ಎಂದು ಚಿಕ್ಕೋಡಿ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜ್ ಪ್ರಾಧ್ಯಾಪಕ ಡಾ.ವಿನೋದ ಬಿರಾದಾರ ಹೇಳಿದರು.
ಪಟ್ಟಣದ ಚೌಸನ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ' ಎನ್ನುವ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಲಿಕಾ ಗುಣಮಟ್ಟ ವೃದ್ಧಿಗೆ ಎಐ ಹೇಗೆ ಬಳಸಿಕೊಳ್ಳಬಹುದು. ಗ್ರಾಮೀಣ ಮತ್ತು ನಗರ ಶಿಕ್ಷಣದ ನಡುವಿನ ಅಂತರ ತಗ್ಗಿಸುವಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಪರಿವರ್ತನೆ ಮಾಡುವಲ್ಲಿ, ಭಾಷೆಗಳಲ್ಲಿ ಹೇಗೆ ಎಐ ಕೃತಕ ಬುದ್ಧಿಮತ್ತೆ ಪರಿಣಾಮಕಾರಿ ಬಳಕೆ ಮಾಡಿಕೊಳ್ಳಬಹುದು. ತರಗತಿಯ ನಿರ್ವಹಣೆ ಅಧ್ಯಯನ ಯೋಜನೆಗಳಲ್ಲಿ ಚಾಟ್ ಜಿಪಿಟಿ, ಕೋ ಪೈಲೆಟ್ ಮತ್ತಿತರ ಎಐ ಆಧರಿತ ಸಾಧನೆಗಳ ಸಹಾಯ ಪಡೆದುಕೊಂಡು ಮಕ್ಕಳಲ್ಲಿ ಎಐ ಬಗ್ಗೆ ಕುತೂಹಲ ಮೂಡಿಸಿ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಡಾ. ಕನಕಾಚಲ ಕನಕಗಿರಿ ಮಾತನಾಡಿ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ನಿಧಾನವಾಗಿ ಪ್ರತಿಯೊಂದು ವಲಯವನ್ನು ಪ್ರವೇಶಿಸುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗೆ ಕಾರಣವಾಗಿದೆ ಎಂದರು. ಪ್ರಶಿಕ್ಷಣಾರ್ಥಿಗಳಾದ ಪ್ರಿಯಾಂಕ ಸಿಂಗಾಯಿ, ಅನಿತಾ ಪೊದ್ದಾರ್ ಅನಿಸಿಕೆ ವ್ಯಕ್ತಪಡಿಸಿದರು.
ಎಂ.ಎಚ್.ರಾವುತ, ಪ್ರಶಾಂತ ಪತ್ತಾರ ಇತರರಿದ್ದರು. ಡಾ.ಎನ್.ಎಸ್.ಶಿಂಧೆ ಸ್ವಾಗತಿಸಿದರು. ವೈಶಾಲಿ ಗಿರಿಮಲ್ಲನ್ನವರ, ಶಿಲ್ಪಾ ಪಾಟೀಲ ನಿರೂಪಿಸಿದರು. ಎಸ್.ಎಂ ಚಂದಗಡೆ ವಂದಿಸಿದರು.