ಎಎಸ್​ಪಿ ಹೆಸರಲ್ಲಿ ವಂಚನೆಗೆ ಯತ್ನ

14bkl3
Published on

ಭಟ್ಕಳ: ಇಲ್ಲಿನ ಎಎಸ್​ಪಿ ನಿಖಿಲ್ ಬುಳ್ಳಾವರ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ವಂಚಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಭಟ್ಕಳ ಎಎಸ್​ಪಿ ನಿಖಿಲ್ ಬಿ. ಅವರ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಸೃಷ್ಟಿಸಿ ಅವರ ಪರಿಚಯಸ್ಥರ ಖಾತೆಗೆ ಸಂದೇಶ ರವಾನೆ ಮಾಡಿ ಹಣ ಕೇಳಲಾಗಿದೆ. ಈ ವಿಷಯ ಎಎಸ್​ಪಿ ನಿಖಿಲ್ ಬಿ ಅವರ ಗಮನಕ್ಕೆ ಬರುತ್ತಿರುವಂತೆ ಈ ರೀತಿ ಹಣ ಕೇಳಿದರೆ ಇದಕ್ಕೆ ದಯವಿಟ್ಟು ಸ್ಪಂದಿಸಬೇಡಿ ಎಂದು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಸ್ಕಿ›ೕನ್ ಶಾಟ್ ಹಾಕಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಕಾರವಾರ ಗ್ರಾಮೀಣ ಠಾಣೆಯ ಪಿಎಸ್​ಐ ರೇವಣ್ಣ ಜೀರನಕಳಗಿ ಅವರ ಹೆಸರಿನಲ್ಲಿ ಅವರ ಸ್ನೇಹಿತರೊಬ್ಬರಿಗೆ 7 ಸಾವಿರ ವಂಚಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net