ಎಎಪಿ ಸದಸ್ಯತ್ವ ನೋಂದಣಿ ಅಭಿಯಾನ

22 SARAG 6
ಆಮ್ ಆದ್ಮಿ ಪಕ್ಷಕ್ಕೆ ಹತ್ತು ವರ್ಷ ತುಂಬಿದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸರಗೂರು ಬಸ್ ನಿಲ್ದಾಣದ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಗ್ರಾಮೀಣ ಮಹೇಶ್, ಸರಗೂರು ಕೃಷ್ಣ, ಸರಗೂರು ನಾಗರಾಜು, ಜವರ, ದಿವ್ಯ ನಾಥನ್ ಇದ್ದರು.
Published on

ಸರಗೂರು: ಆಮ್ ಆದ್ಮಿ ಪಕ್ಷಕ್ಕೆ ಹತ್ತು ವರ್ಷ ತುಂಬಿದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಶನಿವಾರ ಸದಸ್ಯತ್ವ ನೋಂದಣಿ ಅಭಿಯಾನ ಜರುಗಿತು.

ಪಟ್ಟಣದ ಬಸ್ ನಿಲ್ದಾಣ ಮುಂಭಾಗದಲ್ಲಿ ಆಯೋಜಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಸಂಯೊಜಕ ಗ್ರಾಮೀಣ ಮಹೇಶ್ ಮಾತನಾಡಿ, ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರು ಆಮ್ ಆದ್ಮಿ ಪಕ್ಷ ಸೇರಲು ಹಾಗೂ ಬೆಂಬಲಿಸಲು ಮೊ.7065055757ಕ್ಕೆ ಮಿಸ್ಡ್ ಕಾಲ್ ನೀಡಬಹುದು ಎಂದು ತಿಳಿಸಿದರು.ಇದೇ ವೇಳೆ ಪಕ್ಷದ ಸದಸ್ಯತ್ವ ಸೋಂದಣಿ ಪ್ರಾರಂಭಿಸಿ, ಅಭಿಯಾನದ ನಂಬರ್ ಸಹ ಕೂಡ ಬಿಡುಗಡೆ ಮಾಡಲಾಯಿತು. ಸದಸ್ಯತ್ವ ಸೋಂದಣಿ ಅಭಿಯಾನ ಸಂಜೆ ಆರು ಗಂಟೆಯವರೆಗೂ ನಡೆಯಿತು.

ಪುಸ್ತಕ ವಿತರಣೆ: ಇದೇ ವೇಳೆ ಸಂವಿಧಾನ ದಿನಾಚರಣೆ ಪ್ರಯುಕ್ತ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ರಾಜಕೀಯ, ಸಂವಿಧಾನ, ಸಾಮಾನ್ಯ ಜ್ಞಾನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ಸರಗೂರು ತಾಲೂಕು ಹೋರಾಟ ಸಮಿತಿ ಸಂಚಾಲಕ ಸರಗೂರು ಕೃಷ್ಣ, ಪಕ್ಷದ ಕಾರ್ಯಕರ್ತರಾದ ನಾಗರಾಜು, ಜವರ, ದಿವ್ಯನಾಥನ್, ಸ್ವಾಮಿಗೌಡ, ಮಹದೇವಸ್ವಾಮಿ, ಮಣಿಕಂಠ ವಿಶ್ವಕರ್ಮ, ಮಹೇಶ್ ಸರಗೂರು, ಪ್ರಭು, ವಿಶ್ವ, ಮೂರ್ತಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net