ಎಎಂಆರ್‌ಪಿಎಲ್ ತೈಲ ಸಂಸ್ಕರಣೆ ಪ್ರಮಾಣ ಕುಸಿತ

mrpl new
Published on

ಮಂಗಳೂರು: ಕೋವಿಡ್‌ನಿಂದ ಪೆಟ್ರೋಲಿಯಂ ತೈಲೋತ್ಪನ್ನಗಳಿಗೆ ಬೇಡಿಕೆ ಇಳಿಮುಖವಾಗಿದ್ದು ಎಂಆರ್‌ಪಿಎಲ್ ತೈಲ ಸಂಸ್ಕರಣೆ ಪ್ರಮಾಣದಲ್ಲಿ ಶೇ.15ರಷ್ಟು ಕಡಿತ ಮಾಡಿದೆ. ಕೋವಿಡ್ ಲಾಕ್‌ಡೌನ್ ಬಳಿಕ ಕೈಗಾರಿಕಾ ಬಳಕೆಯ ಡೀಸೆಲ್ ಬೇಡಿಕೆ ಕಡಿಮೆಯಾಗಿದೆ. ಅಂತೆಯೇ ಡೀಸೆಲ್ ಕಾರುಗಳ ಬೆಲೆ ಏರಿಕೆ ಇತ್ಯಾದಿಯಿಂದಾಗಿ ಬೇಡಿಕೆ ಕುಸಿದಿದೆ. ಅದು ಇದುವರೆಗೆ ಚೇತರಿಕೆ ಕಂಡಿಲ್ಲ.

ಅಲ್ಲದೆ ಮಹಾರಾಷ್ಟ್ರ, ಬೆಂಗಳೂರು ಮುಂತಾದ ನಗರಗಳಲ್ಲಿ ಕೊವಿಡ್ ಪ್ರಕರಣಗಳಲ್ಲಿ ಏರಿಕೆಯಿಂದಾಗಿಯೂ ಸಂಚಾರ ಇಳಿಮುಖವಾಗಿದೆ. ಇದರಿಂದ ರಿಫೈನರಿಯಲ್ಲಿ ಸಂಸ್ಕರಣೆ ವೇಗ ತಗ್ಗಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಮುಂದೆ ಬೇಡಿಕೆ ಸಹಜಗೊಳ್ಳುವವರೆಗೆ ಇದೇ ಪ್ರಮಾಣದಲ್ಲೇ ಸಂಸ್ಕರಣೆ ಮುಂದುವರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net