ಎಎಂ ಗುಡಿಯ 20 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ

CTD FIRe.......
Published on

ಚಿತ್ರದುರ್ಗ: ಜೋಗಿಮಟ್ಟಿ ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ನಗರದ ಹೊರವಲಯದ ಎ. ಎಂ. ಗುಡಿ ಅರಣ್ಯದ ಅಂದಾಜು 20 ಎಕರೆ ಪ್ರದೇಶಕ್ಕೆ ಬುಧವಾರ ರಾತ್ರಿ ಬೆಂಕಿ ಬಿದ್ದಿದೆ.

ದುಷ್ಕರ್ಮಿಗಳ ಕೃತ್ಯ ಇದಕ್ಕೆ ಕಾರಣವೆಂದು ಶಂಕಿ ಸಿರುವ ಚಿತ್ರದುರ್ಗ ವಲಯ ಅರಣ್ಯಾಧಿಕಾರಿ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ. ಗ್ರಾಮಾಂತರ ಠಾಣೆಗೂ ಪ್ರತ್ಯೇಕವಾಗಿ ದೂರು ನೀಡುವುದಾಗಿ ತಿಳಿಸಿದ್ದಾರೆ.

ರಾತ್ರಿ ಬೆಂಕಿ ಹೊತ್ತಿರುವ ಕುರಿತ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದಳವರೂ ಧಾವಿಸಿದ್ದರು. ಆದರೆ, ದುಷ್ಕರ್ಮಿಗಳು ರಾತ್ರಿ ಐದು ಕಡೆ ಬೆಂಕಿ ಹಚ್ಚಿದ್ದ ಸ್ಥಳದಲ್ಲೇ ಬೆಳಗ್ಗೆ 6ರ ಸಮಯದಲ್ಲಿ ಮತ್ತೆ ಈ ದುಷ್ಕೃತ್ಯ ಎಸಗಿದ್ದಾರೆ. ಕೂಡಲೇ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಯಿತು ಎಂದು ವಲಯ ಅರ ಣ್ಯಾಧಿಕಾರಿ ವಸಂತ್‌ಕುಮಾರ್ ತಿಳಿಸಿದ್ದಾರೆ.

ಕಾರ‌್ಯಾಚರಣೆಯಲ್ಲಿ ಡಿಆರ್‌ಎಫ್‌ಪ್ರದೀಪ್,ಅರಣ್ಯ ಪಾಲಕ ಅಂಜಿನಿಗೌಡ, 20ಕ್ಕೂ ಹೆಚ್ಚು ಫಾರೆಸ್ಟ್ ವಾಚರ್‌ಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net