ಎಇಇ ಜೆಇಗೆ ನೋಟಿಸ್

0608 AFZ 01
ಅಫಜಲಪುರ ತಾಲೂಕಿನ ಗೊಬ್ಬುರ (ಬಿ) ಗ್ರಾಮಕ್ಕೆ ಜಿಪಂ ಸಿಇಒ ಭಂವರಸಿAಗ್ ಮೀನಾ ಭೇಟಿ ನೀಡಿ ಜೆಜೆಎಂ ಕಾಮಗಾರಿ ಪರಿಶೀಲಿಸಿದರು. ತಾಪಂ ಇಒ ವೀರಣ್ಣ ಕೌಲಗಿ ಇತರರಿದ್ದರು.
Published on

ಅಫಜಲಪುರ: ಗೊಬ್ಬೂರ (ಕೆ) ಮತ್ತು ಬಿದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ ಕಾಮಗಾರಿ ಕಳಪೆಯಿಂದ ನಡೆದಿರುವ ಬಗ್ಗೆ ಜನರು ದೂರು ನೀಡುತ್ತಿದ್ದು, ಕಾಮಗಾರಿ ನಿರ್ವಹಣೆ ಮಾಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಗಿರೀಶ ಗುಡ್ಡಾ ಮತ್ತು ಜೆಇ ಪ್ರಶಾಂತಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಭಂವರ್‌ಸಿAಗ್ ಮೀನಾ ತಿಳಿಸಿದರು.

ಗೊಬ್ಬುರ (ಕೆ), ಬಾದನಳ್ಳಿ, ಮದರಾ (ಕೆ), ಅವರಾದ, ಬಡದಾಳ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಗ್ರಾಮದಲ್ಲಿನ ಕುಡಿವ ನೀರಿನ ಮೂಲಗಳ ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು. ಪೈಪ್‌ಲೈನ್ ಕಾಮಗಾರಿಗೆ ಅಗೆದಿರುವ ರಸ್ತೆಯನ್ನು ಕಾಂಕ್ರೀಟ್ ಹಾಕಿ ಸರಿಪಡಿಸಬೇಕು. ಬಡದಾಳ ತಾಂಡಾದಲ್ಲಿ ಕುಡಿಯುವ ನೀರು ಸೋರಿಕೆಯಾಗುತ್ತಿದ್ದು, ಹಾಳಗಾದಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಮದರಾ ಗ್ರಾಪಂ ವ್ಯಾಪ್ತಿಯ ದಣ್ಣೂರಿನಲ್ಲಿ ಜೆಜೆಎಂ ಕಾಮಗಾರಿ ಕಳಪೆಯಿಂದ ನಡೆದಿರುವುದಲ್ಲದೆ, ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಪಿಡಿಒ ವಿದ್ಯಾಧರ ಕಾಂಬಳೆಗೆ ನೋಟಿಸ್ ನೀಡಲಾಗಿದೆ. ಮನೆ- ಮನೆಗೂ ಶುದ್ಧ ನೀರು ಸರಬರಾಜು ಮಾಡುವ ಸದುz್ದೆÃಶದಿಂದ ಸರ್ಕಾರ ಜೆಜೆಎಂ ಯೋಜನೆ ಜಾರಿಗೆ ತಂದಿದೆ. ಗುಣಮಟ್ಟದ ಜತೆಗೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ತಾಕೀತು ಮಾಡಿದರು. ತಾಪಂ ಇಓ ವೀರಣ್ಣ ಕೌಲಗಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಗಿರೀಶ ಗುಡ್ಡಾ, ಜೆಇ ಪ್ರಶಾಂತ ಇತರರಿದ್ದರು.

೩೫ ಮಕ್ಕಳಲ್ಲೇ ಮೂವರೇ ಹಾಜರು: ಅವರಾದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೩೫ ಮಕ್ಕಳು ಹಾಜರಾತಿಯಲ್ಲಿದ್ದು, ಆದರೆ ಜಿಪಂ ಸಿಇಒ ಭಂವರ್‌ಸಿAಗ್ ಮೀನಾ ಭೇಟಿ ನೀಡಿದ ಸಂದರ್ಭದಲ್ಲಿ ಕೇವಲ ಮೂವರು ಮಕ್ಕಳು ಹಾಜರಿದ್ದರು. ಅಲ್ಲದೆ ಮಕ್ಕಳಿಗೆ ಮೊಟ್ಟೆ ವಿತರಿಸದಿರುವುದು ಗಮನಕ್ಕೆ ಬಂತು. ಇದರಿಂದ ಆಕ್ರೋಶಗೊಂಡ ಸಿಇಒ, ಕರ್ತವ್ಯದಲ್ಲಿ ನಿರ್ಲಕ್ಷÈ ವಹಿಸಿದವರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net