

ಕೆ.ಆರ್.ನಗರ: ಕೆ.ಆರ್.ನಗರದ ಲೋಕೋಪಯೋಗಿ ಇಲಾಖೆ ನೂತನ ಎಇಇ ಎಸ್.ವಿ.ಸುಮಿತಾ ಬುಧವಾರ ಅಧಿಕಾರ ಸ್ವೀಕರಿಸಿದರು.
ಪ್ರಭಾರ ಎಇಇ ಬೋರಯ್ಯ ಅವರಿಂದ ಬುಧವಾರ ಇಲಾಖೆಯ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು. ತುಮಕೂರು ಗ್ರಾಮಾಂತರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದ ಸುಮಿತಾ ಅವರನ್ನು ಸರ್ಕಾರ ಇಲ್ಲಿಗೆ ವರ್ಗಾವಣೆ ಮಾಡಿದೆ.
ಇಂಜಿನಿಯರ್‌ಗಳಾದ ಸಿದ್ದೇಶ್ವರ ಪ್ರಸಾದ್, ಚಂದನ್, ಕೃತಿ, ಅಭಿಷೇಕ್, ಇಸ್ಮಾಯಿಲ್, ಇಲಾಖೆ ವ್ಯವಸ್ಥಾಪಕ ಸಿ.ಜೆ.ಅರುಣ್ ಕುಮಾರ್ ಇತ್ತಿತರರು ಇದ್ದರು.