ಎಆರ್‌ಕೆಯಿಂದ ಜ್ಞಾನ ಪ್ರಕಾಶ್ ಸ್ವಾಮೀಜಿ ಭೇಟಿ

16kglphoto-2...
Published on

ಕೊಳ್ಳೇಗಾಲ: ಕೊಳ್ಳೇಗಾಲ ಕ್ಷೇತ್ರದ ನೂತನ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಮಂಗಳವಾರ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶಸ್ವಾಮಿಜಿ ಹಾಗೂ ನರಸೀಪುರದ ವಾಟಾಳ್ ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು.


ಕೊಳ್ಳೇಗಾಲ ಪಟ್ಟಣದಲ್ಲಿ ಇತ್ತೀಚೆಗೆ ಬಿ.ರಾಚಯ್ಯ ಪ್ರತಿಷ್ಠಾನ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ 1 ಮತದಿಂದ ಸೋತು ನೊಂದಿದ್ದ ಎ.ಆರ್.ಕೃಷ್ಣಮೂರ್ತಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ 1 ಲಕ್ಷ ಮತದಿಂದ ಗೆಲ್ಲುತ್ತಾರೆ ಎಂದು ಆರ್ಶೀವಾದಿಸಿದರು. ಅಂತೆಯೇ, ಎಆರ್‌ಕೆ 1.08.363 ಮತ ಪಡೆದು 59.519 ಮತದ ಅಂತರದಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದಾರೆ.


ಈ ಹಿನ್ನೆಲೆ ಎ.ಆರ್.ಕೃಷ್ಣಮೂರ್ತಿ ಅವರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿ ಅವರನ್ನು ಭೇಟಿ ಮಾಡಿ ಹಾರ, ಶಾಲು, ಫಲಪುಷ್ಪ ನೀಡುವ ಮೂಲಕ ಧನ್ಯವಾದ ತಿಳಿಸಿ ಆರ್ಶೀವಾದ ಪಡೆದರು.


ಅಂತೆಯೇ, ಮೈಸೂರಿನ ಗಾಂಧಿನಗರದ ಉರಿ ಲಿಂಗಿಪೆದ್ದಿಮಠದ ಜ್ಞಾನ ಪ್ರಕಾಶಸ್ವಾಮಿಜಿ ಅವರನ್ನು ಭೇಟಿ ಹಾರ, ಶಾಲು ಹಾಕಿ ಫಲಪುಷ್ಪ ನೀಡುವ ಮೂಲಕ ಸನ್ಮಾನಿಸಿ ಆರ್ಶೀವಾದ ಪಡೆದಿದ್ದಾರೆ.ಈ ವೇಳೆ ಸ್ವಾಮಿಜಿ ಮಾತನಾಡಿ, ಸಮಾಜದ ಎಲ್ಲ ಜನಾಂಗವೂ ಸುಖ, ಶಾಂತಿ, ಬಾಳ್ವೆ ನಡೆಸಲು ಅಗತ್ಯವಿರುವ ಕೆಲಸ ಮಾಡಬೇಕು. ನೊಂದವರ, ಶೋಷಿತರ ಧ್ವನಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ.


ಬಸವನಂದಾ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಶೇಖರ್ ಬುದ್ಧ, ನಾಗರಾಜು ಉಪ್ಪಾರ್, ರಾಜಶೇಖರ್, ಚೇತನ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net