

ಹೊಳೆನರಸೀಪುರ : ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಹೆಚ್ ಬಿ ರಾಧಾಕೃಷ್ಣ ಶೆಟ್ಟಿ ಅವರ ಧರ್ಮಪತ್ನಿ ಎಆರ್ ವಾಸವಾಂಬ ಅವರ ಜೀವಿತಾವಧಿ ವರೆಗೆ ಉಚಿತ ಬಸ್ ಪಾಸ್ ನೀಡಲಾಗಿದೆ ಎಂದು ಹೊಳೆನರಸೀಪುರ ಘಟಕ ವ್ಯವಸ್ಥಾಪಕ ಪಾಪ ನಾಯಕ್ ತಿಳಿಸಿದರು.
ಸ್ವಾತಂತ್ರಕ್ಕಾಗಿ ಹೋರಾಡಿದಂತಹ ರಾಧಾಕೃಷ್ಣ ಶೆಟ್ಟಿ ಅವರಿಗೆ ಗೌರವಾರ್ಥವಾಗಿ ಹಾಸನ ವಿಭಾಗ ದ ಕೆ ಎಸ್ ಆರ್ ಟಿ ಸಿ ವತಿಯಿಂದ ಅವರ ಧರ್ಮಪತ್ನಿ ಗೆ ನಿಗಮದ ಸಾಮಾನ್ಯ ರಾಜಹಂಸ ವೋಲ್ವೋ ಬಸ್ ಗಳಲ್ಲಿ ಅವರ ಜೊತೆಗೆ ಒಬ್ಬ ಸಹಾಯಕರ ಒಡಗೂಡಿ ಸಂಚರಿಸುವ ಅವಕಾಶವನ್ನು ಒದಗಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಂದ ಗೌರವಾನ್ವಿತ ವಾಸವಾಂಬ ಅವರನ್ನು ಗೌರವಿಸಿ ಸನ್ಮಾನಿಸಿ ಉಚಿತ ಬಸ್ ಪಾಸ್ ಅನ್ನ ನೀಡಿದರು.ಘಟಕ ವ್ಯವಸ್ಥಾಪಕರು ಹಾಗೂ ವಿಭಾಗದ ತಾಂತ್ರಿಕ ಶಿಲ್ಪಿ, ಲೆಕ್ಕಪತ್ರ ಸಹಾಯಕರು ,ಆಡಳಿತ ಕಿರಿಯ ಸಹಾಯಕರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.