ಎಂವಿಎಸ್‌ನಡಿ ಚಿತ್ರದುರ್ಗ ತಾಲೂಕಿನ 140 ಗ್ರಾಮಗಳಿಗೆ ಕುಡಿವ ನೀರು

CTD MLA BOOMI PUJE.....
Published on

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಕ್ಯಾದಿಗೆರೆ ಗ್ರಾಮದ ಮಟ್ಟಿ ಬಸವೇಶ್ವರ ದೇವಾಲಯ ಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವಲಯ ಬ್ಯಾಲೆನ್ಸಿಂಗ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಶನಿವಾರ ಭೂಮಿಪೂಜೆ ನೆರವೇರಿಸಿದರು.

452 ಕೋಟಿ ರೂ.ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ವಾಣಿ ವಿಲಾಸ ಸಾಗರ ಜಲಾಶಯದಿಂದ ಚಿತ್ರದುರ್ಗ ಹಾಗೂ ಹಿರಿಯೂರು ತಾಲೂಕಿನ ಬಿಟ್ಟು ಹೋದ 301 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 140 ಹಳ್ಳಿಗಳಿಗೆ ನೀರು ಸರಬರಾಜು ಕಾಮಗಾರಿಗೆ ಅಂದಾಜು 250 ಕೋಟಿ ರೂ. ವೆಚ್ಚವಾಗಲಿದೆ. 1 ಮಾಸ್ಟರ್ ಬ್ಯಾಲೆನ್ಸಿಂಗ್ ಟ್ಯಾಂಕ್, 9- ವಲಯ ಬ್ಯಾಲೆನ್ಸಿಂಗ್ ಟ್ಯಾಂಕ್‌ಗಳು ಹಾಗೂ 40 ಓವರ್ ಹೆಡ್ ಟ್ಯಾಂಕ್‌ಗಳು ನಿರ್ಮಾಣವಾಗಲಿವೆ ಎಂದು ತಿಳಿಸಿದರು.

9 ವಲಯ ಬ್ಯಾಲೆನ್ಸಿಂಗ್ ಟ್ಯಾಂಕ್‌ಗಳ ಪೈಕಿ ಕ್ಯಾದಿಗೆರೆಯಲ್ಲಿ ಬ್ಯಾಲೆನ್ಸಿಂಗ್ ಟ್ಯಾಂಕ್ ನಿರ್ಮಾಣವಾಗುತ್ತಿದೆ. ಈ ಟ್ಯಾಂಕ್‌ನಿಂದ ಡಿಎಸ್ ಹಳ್ಳಿ, ಜೆ.ಎನ್. ಕೋಟೆ, ದ್ಯಾಮವ್ವನಹಳ್ಳಿ ಗ್ರಾಪಂಗಳ ವ್ಯಾಪ್ತಿಯ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಾಗಲಿದೆ ಎಂದು ಶಾಸಕರು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್. ಶಿವಣ್ಣ, ಡಿಎಸ್‌ಹಳ್ಳಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ತಿಪ್ಪೇಸ್ವಾಮಿ, ಸದಸ್ಯರಾದ ಕಲ್ಲಪ್ಪ, ಲಕ್ಷ್ಮೀದೇವಿ, ಕಲ್ಲೇಶ್, ವಿದ್ಯಾವತಿ, ರೆಹಮಾನ್‌ಸಾಬ್, ರಾಕೇಶ್, ಮಾರುತಿ, ಸಾಲಪಯ್ಯ, ಸುಧಮ್ಮ, ಪಿಡಿಒ ಶಿಲ್ಪಾ, ಇಂಗಳದಾಳು ಗ್ರಾಪಂ ಅಧ್ಯಕ್ಷ ಶಿರವಲಪ್ಪ, ತಾಪಂ ಇಒ ರವಿಕುಮಾರ್, ಮುಖಂಡರಾದ ಲಿಂಗಬಸಪ್ಪ, ದೇವೇಂದ್ರಪ್ಪ, ಪಾಪಣ್ಣ, ಚಿತ್ರದುರ್ಗ ನಗರಸಭೆ ಸದಸ್ಯ ರಮೇ ಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net