ಎಂಡಿಎ ಆಯುಕ್ತರಾಗಿ ರಕ್ಷಿತ್; ಎ.ಎನ್.ರಘುನಂದನ್ ವರ್ಗ

muda case
Published on

ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ(ಎಂಡಿಎ)ಆಯುಕ್ತರಾಗಿ ಕೆಎಎಸ್ ಅಧಿಕಾರಿ ಕೆ.ಆರ್.ರಕ್ಷಿತ್ ಅವರನ್ನು ನಿಯೋಜಿಸಲಾಗಿದ್ದು, ಈ ಸ್ಥಾನದಲ್ಲಿದ್ದ ಎ.ಎನ್. ರಘುನಂದನ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಒಂದೇ ಸಲ ಎರಡು ಹುದ್ದೆಗೆ ರಕ್ಷಿತ್ ಅವರನ್ನು ವರ್ಗಾಯಿಸಲಾಗಿದೆ. ಪ್ರಸ್ತುತ ಮೈಸೂರು ಉಪವಿಭಾಗಾಧಿಕಾರಿಯಾಗಿರುವ ಅವರನ್ನು ಮೊದಲು ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ನಿಯೋಜಿಸಲಾಗಿದೆ. ಇದರೊಂದಿಗೆ ಎಂಡಿಎ ಆಯುಕ್ತರ ಹುದ್ದೆ ಹೊಣೆಗಾರಿಕೆಯನ್ನೂ ವಹಿಸಲಾಗಿದೆ.

ಈ ಎರಡು ಪ್ರಕ್ರಿಯೆಗಳು ಸೋಮವಾರವೇ ನಡೆದಿವೆ. ಏಕಕಾಲಕ್ಕೆ ಎರಡು ಹುದ್ದೆಗಳನ್ನು ನಿರ್ವಹಣೆ ಮಾಡಬೇಕಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಕೆ.ಎಚ್.ಕೇಶವಪ್ರಸಾದ್ ನೇಮಕ ಆದೇಶ ಹೊರಡಿಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಇದೀಗ ಮೈಸೂರು ಅಭಿವೃದ್ಧಿ ಪ್ರಾಧಿಕಾರವಾಗಿ ಪರಿವರ್ತನೆಗೊಂಡ ಬೆನ್ನಲ್ಲೇ ಈ ವರ್ಗಾವಣೆ ಹೊರಬಿದ್ದಿದೆ.

50:50ರ ಅನುಪಾತದ ನಿವೇಶನ ಹಂಚಿಕೆ ಪ್ರಕರಣದಿಂದ ಎಂಡಿಎ ವಿವಾದಕ್ಕೆ ಸಿಲುಕಿಕೊಂಡಿತ್ತು. ಬಳಿಕ ಅನೇಕ ಅವಾಂತರಗಳೂ ಹೊರಬಿದ್ದಿದ್ದವು.

ಈ ಕಾರಣಕ್ಕೆ ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್‌ಕುಮಾರ್ ವರ್ಗಾವಣೆ ಮಾಡಿ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು.

ಅವರ ವರ್ಗಾವಣೆಯಿಂದ ತೆರವು ಆಗಿದ್ದ ಹುದ್ದೆಗೆ ಎ.ಎನ್.ರಘುನಂದನ್ ಅವರನ್ನು ನಿಯೋಜಿಸಲಾಗಿತ್ತು. ಅವರು 2024 ಜುಲೈ 2ರಂದು ಅವರು ಅಧಿಕಾರ ಸ್ವೀಕಾರ ಮಾಡಿದ್ದರು. ಒಂದು ವರ್ಷ ಪೂರ್ಣಗೊಳ್ಳುವ ಮುನ್ನವೇ ಅವರನ್ನೂ ವರ್ಗಾವಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net