

ಶಿಕಾರಿಪುರ: ಪಟ್ಟಣದ ಮೀನá- ಮಾರುಕಟ್ಟೆ ಬಳಿ ಸೋಮವಾರ ಆಮೆ ಮಾರಾಟ ಮಾಡಲಾಗá-ತ್ತಿದೆ ಎಂಬ ಮಾಹಿತಿ ತಿಳಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಎಂಟು ಆಮೆಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿಗಳು ಪರಾರಿಯಾಗಿದ್ದಾರೆ.
ಮೀನು ಹಿಡಿಯಲು ಹೋದಾಗ ಆಮೆಗಳು ಬಲೆಗೆ ಬಿದ್ದಿರಬಹá-ದು. ಆದರೆ ಮಾರಾಟ ಮಾಡá-ವುದು ಅಪರಾಧ. ಆರೋಪಿಗಳನ್ನು ಬಂಧಿಸಲು ತಂಡ ರಚಿಸಲಾಗಿದೆ. ಆಮೆಗಳನ್ನು ಹುಚ್ಚರಾಯಸ್ವಾಮಿ ಕೆರೆಗೆ ಬಿಡಲಾಗಿದೆ ಎಂದು ಎಸಿಎಫ್ ಗೋಪ್ಯಾನಾಯ್ಕ ತಿಳಿಸಿದರು.
ಇಲಾಖೆ ಸಿಬ್ಬಂದಿ ಕೆ.ಬಿ.ರಾಘವೇಂದ್ರ, ಎಸ್.ಅಮಿತ್, ಅಮರೇಶ್, ಹರೀಶ್, ಪ್ರದೀಪ್ ಕಾರ್ಯಾಚರಣೆಯಲ್ಲಿದ್ದರು.