ಎಂಟನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

05-09--krs2 (1)
ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಬೆಂಬಲಿಸಿ ಮಂಗಳವಾರ ಕರವೇ ಮತು ಚಿನಕುರಳಿ ಜ್ಣಾನವಿಕಾಸ ವಿಶೇಷ ಶಾಲೆ ಮಕ್ಕಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಗಜೇಂದ್ರ ಗೋವಿಂದರಾಜು, ನಾಗರಾಜು, ಮಂಜು, ಅಣ್ಣೇಗೌಡ, ಮಹದೇವ, ರವಿ ಇದ್ದರು.
Published on

ಕೆ.ಆರ್.ಸಾಗರ: ತಮಿಳುನಾಡಿಗೆ ಕಾವೇರಿ ಹರಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಇಲ್ಲಿನ ಬೃಂದಾವನ ರಸ್ತೆಯ ಟಿ-ಜಂಕ್ಷನ್ ಬಳಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ 7 ದಿನ ಪೂರೈಸಿದೆ.

ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೇಗೌಡ ನೇತೃತ್ವದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆಯ(ನಾರಾಯಣಗೌಡ ಬಣ) ಪಾಂಡವಪುರ ತಾಲೂಕು ಘಟಕದ ಸದಸ್ಯರು ಮತ್ತು ಚಿನಕುರಳಿ ಜ್ಞಾನವಿಕಾಸ ವಿಶೇಷ ಶಾಲೆ ಮಕ್ಕಳು ಭಾಗವಹಿಸಿದ್ದರು.

ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

ರಾಜ್ಯದ ರೈತರ ಹಿತವನ್ನು ಸರ್ಕಾರ ಕಾಪಾಡಬೇಕಿದೆ. ನಮಗೆ ವ್ಯವಸಾಯವೇ ಜೀವನವಾಗಿದ್ದು, ತಮಿಳುನಾಡಿಗೆ ಬಿಡುವುದನ್ನು ನಿಲ್ಲಿಸಬೇಕು ಎಂದು ಚಿತನಕುರಳಿ ಶಾಲೆಯ ವಿದ್ಯಾರ್ಥಿ ವೇದಾಂತ ಕನ್ನಡ ಧ್ವಜ ಹಿಡಿದು ಒತ್ತಾಯಿಸಿದನು.

ಕರವೇ ಪಾಂಡವಪುರ ತಾಲೂಕು ಅಧ್ಯಕ್ಷ ಗಜೇಂದ್ರ ಗೋವಿಂದರಾಜು, ನಾಗರಾಜು, ಮಂಜು, ಅಣ್ಣೇಗೌಡ, ಮಹದೇವ, ರವಿ, ರೈತ ಸಂಘದ ಸದಸ್ಯರಾದ ಬನ್ನಂಗಾಡಿ ನಾಗೇಗೌಡ ನಾಗರಾಜು, ವಿಜಯಕುಮಾರ್ ಕೃಷ್ಣೆಗೌಡ, ಗೊವಿಂದೇಗೌಡ, ಜಗದೀಶ್, ಪ್ರಕಾಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net