

ಬಸವಕಲ್ಯಾಣ: ವಿಧಾನ ಪರಿಷತ್ ಸದಸ್ಯ ಹಾಗೂ ನಾರಾಯಣಪುರ ಜಿಪಂ ಕ್ಷೇತ್ರದ ಉಸ್ತುವಾರಿ ಡಾ. ಚಂದ್ರಶೇಖರ ಪಾಟೀಲ್ ಅವರು ಕ್ಷೇತ್ರದ ವಿವಿಧೆಡೆ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ಪರವಾಗಿ ಪ್ರಚಾರ ನಡೆಸಿದರು.
ನಾರಾಯಣಪುರ, ಹುಲಗುತ್ತಿ ಗ್ರಾಮಕ್ಕೆ ಭೇಟಿ ನೀಡಿ, ದಿ. ನಾರಾಯಣರಾವ್ ಅವರ ಕನಸು ಸಾಕಾರವಾಗಬೇಕಾದರೆ ಅವರ ಪತ್ನಿ ಮಲ್ಲಮ್ಮ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಕ್ಷೇತ್ರದ ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಇದೆ. ಶೀಘ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಇತರರು ಆಗಮಿಸಿ ಪ್ರಚಾರ ನಡೆಸಲಿದ್ದಾರೆ. ಸರ್ವ ಜನಾಂಗದ ಏಳಿಗೆ ಬಯಸುವ ಕಾಂಗ್ರೆಸ್‌ಗೆ ಬೆಂಬಲಿಸಲು ಕೋರಿದರು.
ಪ್ರಮುಖರಾದ ಆನಂದ ದೇವಪ್ಪ, ಶಿವರಾಜ ನರಶೆಟ್ಟಿ, ಮಾಣಿಕರೆಡ್ಡಿ ಕೌಡ್ಯಾಳೆ, ಅರ್ಜುನ ಕನಕ, ಮಲ್ಲಾರೆಡ್ಡಿ, ನಾರಾಯಣರೆಡ್ಡಿ, ನರಸಾರೆಡ್ಡಿ, ಬಾಲಾಜಿರೆಡ್ಡಿ, ಶಂಕರ ಜಮಾದಾರ, ಚೇತನ ಇತರರಿದ್ದರು.