

ಚಿತ್ರದುರ್ಗ: ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಕಾರ್ಯಕರ್ತರು ಕನ್ನಡಪರ ಹೋರಾಟಗಾರರಾದ ಅನಿಲ್ ದೊಡ್ಡಮನಿ, ಸಂಪತ್‌ಕುಮಾರ್ ಅವರಿಗೆ ಕೊಲೆ ಬೆದರಿಕೆ ಹಾಕಿರುವುದನ್ನು ಖಂಡಿಸಿ, ಸಂಘಟನೆ ನಿಷೇಧಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ವಿಜಯಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ಗೋಪಿನಾಥ್, ಸಿ.ಜಗದೀಶ್, ರತ್ನಮ್ಮ, ನಾಗರಾಜ್ ಮುತ್ತು, ಅವಿನಾಶ್, ಮಹಮದ್ ರಫಿ, ಶಾನ್, ಸುರೇಶ್, ಅಖಿಲೇಶ್, ಹರೀಶ್, ಪ್ರದೀಪ್, ರಾಜಣ್ಣ, ಮಣಿಕಂಠ ಇತರರಿದ್ದರು.