ಎಂ.ಟಿ.ಕೃಷ್ಣೇಗೌಡರಿಗೆ ಅದ್ದೂರಿ ಸ್ವಾಗತ

29ark1
ಅರಕಲಗೂಡು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶನಿವಾರ ಮತ ಪ್ರಚಾರಕ್ಕೆ ಆಗಮಿಸಿದ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡ ಅವರನ್ನು ಬೆಂಬಲಿಗರು ಸ್ವಾಗತಿಸಿದರು.
Published on

ಅರಕಲಗೂಡು: ತಾಲೂಕಿನ ಕೊಣನೂರು ಹಾಗೂ ರಾಮನಾಥಪುರ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ಮತಪ್ರಚಾರ ನಡೆಸಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡ ಅವರಿಗೆ ಜನರಿಂದ ಉತ್ತಮ ಸ್ಪಂದನೆ ದೊರೆಯಿತು.

ಮುದಗನೂರು, ಹೆಗ್ಗಡಿಹಳ್ಳಿ, ವಡ್ವಾನ ಹೊಸಹಳ್ಳಿ, ಮಲ್ಲರಾಜಪಟ್ಟಣ, ಮಲ್ಲಿನಾಥಪುರ, ಯಲಾದಹಳ್ಳಿ, ಹಂಪಾಪುರ, ಕಟ್ಟೇಪುರ, ಗೊಬ್ಬಳಿ, ಗೊಬ್ಬಳಿ ಕಾವಲು, ಸಣ್ಣಕ್ಕಿಗೌಡನಕೊಪ್ಪಲು, ಶೀಗೋಡು, ಸರಗೂರು ಗ್ರಾಮಗಳಲ್ಲಿ ಬಿರುಸಿನ ಮತಯಾಚನೆ ಮಾಡಿದರು. ಮತಯಾಚಿಸಲು ಆಗಮಿಸಿದ ಕೃಷ್ಣೇಗೌಡ ಅವರಿಗೆ ಗ್ರಾಮಸ್ಥರು ಹೂವಿನ ಹಾರ ಹಾಕಿ ಮಂಗಳವಾದ್ಯದೊಂದಿಗೆ ಸ್ವಾಗತ ಕೋರಿದರು. ಕೆಲ ಗ್ರಾಮಗಳಲ್ಲಿ ಅಭಿಮಾನಿಗಳು ಮತ್ತು ಬೆಂಬಲಿಗರು ಕೃಷ್ಣೇಗೌಡರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರೆ, ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.

ಕ್ಷೇತ್ರದ ಮತದಾರರು ಬದಲಾವಣೆ ಬಯಸಿ ಚುನಾವಣೆಯಲ್ಲಿ ನನಗೆ ಆಶೀರ್ವದಿಸಬೇಕು. ಮತದಾರರಿಗೆ ಋಣಿಯಾಗಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ, ನಿರುದ್ಯೋಗ ಹೋಗಲಾಡಿಸಿ ಆರ್ಥಿಕವಾಗಿ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಿಷ್ಠೆಯಿಂದ ಜನಸೇವೆ ಮಾಡುವುದಾಗಿ ತಿಳಿಸಿದರು.

ಕಾಂಗ್ರೆಸ್ ಅನ್ನು ಮಾತೃಪಕ್ಷವೆಂದು ಭಾವಿಸಿ ಹಲವು ವರ್ಷಗಳಿಂದ ಸಂಘಟನೆ ಮಾಡಿದರೂ ಡಿಕೆಶಿ ಸಹೋದರರು ಟಿಕೆಟ್ ನೀಡದೆ ವಂಚಿಸಿದರು. ಮತದಾರರು ನನ್ನ ಕೈ ಹಿಡಿಯುವ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net