ಎಂ.ಟಿ.ಕೃಷ್ಣೇಗೌಡರ ಪರ ಮತ ಪ್ರಚಾರ

4ark2
ಹಳ್ಳಿಮೈಸೂರು ಹೋಬಳಿಯಲ್ಲಿ ನಿವೃತ್ತ ಜಿಲ್ಲಾಧಿಕಾರಿ ಎಸ್. ಪುಟ್ಟಸ್ವಾಮಿ ಪಕ್ಷೇತರ ಅಭ್ಯರ್ಥಿ ಎಂ.ಟಿ. ಕೃಷ್ಣೇಗೌಡರ ಪರ ಗುರುವಾರ ಮತ ಯಾಚಿಸಿದರು.
Published on

ಅರಕಲಗೂಡು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಮೈಸೂರು ಹೋಬಳಿಯಲ್ಲಿ ಗುರುವಾರ ಹೊಳೆನರಸೀಪುರ ತಾಲೂಕು ಕುರುಬರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ ಪಕ್ಷೇತರ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡರ ಪರ ಮತ ಪ್ರಚಾರ ನಡೆಸಿದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯಲು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಪುಟ್ಟಸ್ವಾಮಿ ಅವರಿಗೆ ಪಕ್ಷದ ಟಿಕೆಟ್ ಸಿಗಲಿಲ್ಲ. ನಂತರ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಪುಟ್ಟಸ್ವಾಮಿ ಅವರು ಇದೀಗ ಪಕ್ಷೇತರ ಅಭ್ಯರ್ಥಿ ಕೃಷ್ಣೇಗೌಡ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಕಡುವಿನ ಬಾಚನಹಳ್ಳಿ, ಹಾವಿನ ಮಾರನಹಳ್ಳಿ, ನಗರನಹಳ್ಳಿ ಕೊಪ್ಪಲು, ರಂಗೇನಹಳ್ಳಿ , ಎಂ.ಎಂ ಹಳ್ಳಿ ಕೊಪ್ಪಲು, ಅಣ್ಣೇಚಾಕನಹಳ್ಳಿ, ಬಂಟರ ತಳಾಲು, ದೊಡ್ಡಕನೂರು ಎಡೆಗೌಡನಹಳ್ಳಿ, ದೊಡ್ಡಹಳ್ಳಿ, ದೊಡ್ಡಹಳ್ಳಿ ಕೊಪ್ಪಲು, ದೊಡ್ಡಹಳ್ಳಿ ಸಂತೆ ಮೈದಾನ, ಕುಳಿಕೆರೆಕೊಪ್ಪಲು, ಮರಳ್ಳಿ ಗ್ರಾಮದಲ್ಲಿ ಕೃಷ್ಣೇಗೌಡರ ಪರ ಮತಯಾಚನೆ ಮಾಡಿದರು.

ಮುಖಂಡರಾದ ಕಳ್ಳಿಮುದ್ದನಹಳ್ಳಿ ಲೋಕೇಶ್, ರಾಜೇಗೌಡ, ತಾಪಂ ಮಾಜಿ ಅಧ್ಯಕ್ಷ ಡಿ.ಎಂ. ಪುಟ್ಟೇಗೌಡ, ಕುಮಾರ್ ರಂಗೇನಹಳ್ಳಿ, ವಕೀಲ ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net