ಎಂ.ಜಿ.ವಾರುಕಟ್ಟೆ ಅಂಗಡಿ ಮಳಿಗೆಗೆಗಳ ಬಾಡಿಗೆ ಹೆಚ್ಚಳಕ್ಕೆ ವಿರೋಧ

16 KGF 2
Published on

ಕೆಜಿಎಫ್: ಎಂ.ಜಿ.ವಾರುಕಟ್ಟೆ ಅಂಗಡಿ ಮಳಿಗೆಗೆಗಳ ಬಾಡಿಗೆ ಹೆಚ್ಚಳ ವಾಡುವ ನಿರ್ಧಾರಕ್ಕೆ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಏರ್ಪಡಿಸಿದ್ದ ಸದಸ್ಯರ ಸಾವಾನ್ಯ ಸಭೆಯಲ್ಲಿ ವಾಜಿ ಶಾಸಕ ಎಸ್.ರಾಜೇಂದ್ರನ್ ಆಕ್ಷೇಪ ವ್ಯಕ್ತಪಡಿಸಿದರೆ, ಸದಸ್ಯರು ಮೌನವಾಗಿ ಸಮ್ಮತಿ ಸೂಚಿಸಿದರು.

ನಗರದ ಅಭಿವೃದ್ಧಿಗೆ ಅನುದಾನಗಳ ಕೊರತೆ ಹಿನ್ನೆಲೆಯಲ್ಲಿ ನಗರಸಭೆಯ ಆದಾಯಕ್ಕೆ ಮೂಲವಾಗಿರುವ ಎಂ.ಜಿ.ವಾರುಕಟ್ಟೆ ಅಂಗಡಿ ಮಳಿಗೆಗೆಗಳ ಬಾಡಿಗೆ ಹೆಚ್ಚಳ ವಾಡಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಹೇಳಿದಾಗ ಪ್ರತಿಕ್ರಿಯಿಸಿದ ವಾಜಿ ಶಾಸಕ ಎಸ್.ರಾಜೇಂದ್ರನ್, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದರ ಬಗ್ಗೆ ತೀರ್ವಾನ ಕೈಗೊಳ್ಳುವುದು ಉಚಿತವಲ್ಲ ಎಂದರು.

ಈ ವೇಳೆ ಪೌರಾಯುಕ್ತೆ ಸರ್ವರ್ ಮಚೆಂಟ್ ವಾತನಾಡಿ, ಎಂ.ಜಿ.ವಾರುಕಟ್ಟೆಯಲ್ಲಿ ನಮಗೆ ಸ್ವಚ್ಚತೆಗಾಗಿ 1 ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು, ಖರ್ಚುಗಳನ್ನು ಸರಿದೂಗಿಸಬೇಕಾದರೆ ಬಾಡಿಗೆಯನ್ನು ಹೆಚ್ಚಳ ವಾಡುವುದು ಅನಿವಾರ್ಯ ಎಂದು ತಿಳಿಸಿದರು.

ನಗರಸಭೆ ಸದಸ್ಯೆ ಶಾಲಿನಿನಂದಕುವಾರ ವಾತನಾಡಿ, ಈಶ್ವರ ದೇವಸ್ಥಾನಕ್ಕೆ ಕಾಂಪೌಡ್ ಹಾಕಿ ಮತ್ತು ಅನಧಿಕೃತವಾಗಿ ಒತ್ತುವರಿ ವಾಡಿಕೊಂಡಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸಿ ನಗರಸಭೆ ವಶಕ್ಕೆ ಪಡೆಯಬೇಕು ಎಂದರು.

ನಗರದ ಅಭಿವೃದ್ಧಿಗೆ ಪೂರಕವಾಗುವುದಾದರೆ ಬಾಡಿಗೆ ಹೆಚ್ಚಳ ವಾಡಲು ಸಹಮತವಿದೆ ಎಂದು ವಾಜಿ ನಗರಸಭೆ ಅಧ್ಯಕ್ಷ ರಮೇಶ್‌ಜೈನ್ ಹೇಳಿದರು. ಸರ್ಕಾರದಿಂದ ಅನುಮೋದನೆ ಪಡೆದು ಸಭೆಗೆ ವಿಷಯ ಮಂಡನೆ ವಾಡುವಂತೆ ಸದಸ್ಯ ಜಯಪಾಲ್ ಮನವಿ ಮಾಡಿದರು. ಉಳಿದ ಸದಸ್ಯರು ಮೌನವಾಗಿ ಸಮ್ಮತಿಯನ್ನು ಸೂಚಿಸಿದರು.

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ನಗರಸಭೆ ಅವರಣದಲ್ಲಿ ನಗರಸಭೆ ನಿಧಿಯಿಂದ ಗಾಂಧಿ ಮತ್ತು ಅಂಬೇಡ್ಕರ್ ಕಂಚಿನ ಪ್ರತಿಮೆಗಳ ಸ್ಥಾಪನೆ, 15 ನೇ ಹಣಕಾಸು ಯೋಜನೆಯಡಿ ಟೆಂಡರ್ ಕಾಮಗಾರಿಗಳ ಅನುಮೋದನೆ ಹಾಗೂ ಕೊಳವೆಬಾವಿಗಳ ಪಂಪ್ ಮೋಟಾರ್ ರಿಪೇರಿ ಟೆಂಡರ್ ಕಾರ್ಯಾದೇಶ ಮುಂದುವರಿಕೆ, ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ಬ್ಯಾನರ್‌ಗಳ ಅಳವಡಿಕೆ ನಿಷೇಧಕ್ಕೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ನಗರಸಭೆ ಉಪಾಧ್ಯಕ್ಷೆ ದೇವಿಗಣೇಶ್, ನಗರಸಭೆ ಸದಸ್ಯರಾದ ಜರ್ಮನ್, ಕರುಣಾಕರನ್, ಸೆಂದಿಲ್, ಜಯಪಾಲ್ ಹಾಗೂ ಇತರರು ಹಾಜರಿದ್ದರು.

ಅಮೃತ್ ಯೋಜನೆಗೆ ಸದಸ್ಯರ ಆಕ್ರೋಶ: ನಗರಸಭೆ ಸದಸ್ಯೆ ಜೀವನಿಧಿ ರಾಜೇಶ್ ವಾತನಾಡಿ, ನಗರದಲ್ಲಿ ಅಮೃತ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯಲ್ಲಿ ಕೆಲಸ ವಾಡುವವರು ಸಾರ್ವಜನಿಕರಿಂದ ಅಧಿಕ ಹಣವನ್ನು ವಸೂಲಿ ವಾಡುತ್ತಿದ್ದಾರೆ. ಕಾಮಗಾರಿ ಸಹ ಸರ್ಮಪಕವಾಗಿ ಪೂರ್ಣಗೊಳಿಸದಿರುವುದರಿಂದ ರಸ್ತೆಗಳು ಹದಗೆಟ್ಟಿವೆ ಎಂದು ನಗರ ನೀರು ಸರಬರಾಜು ಮಂಡಳಿ ಜೆಇ ನಾರಾಯಣರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net