ಎಂ.ಕೆ.ಹುಬ್ಬಳ್ಳಿ ಸುತ್ತಮುತ್ತ ವಿದ್ಯುತ್ ಕಡಿತ

HESCOM
Published on

ಬೆಳಗಾವಿ: ಕಿತ್ತೂರ ತಾಲೂಕಿನ ಎಂ.ಕೆ.ಹುಬ್ಬಳ್ಳಿ ವಿದ್ಯುತ್ ವಿತರಣೆ ಉಪಕೇಂದ್ರದಲ್ಲಿ 2ನೇ ತ್ರೈಮಾಸಿಕ ತುರ್ತು ದುರಸ್ತಿ ಕಾರ್ಯವನ್ನು ಸೆ.10ರಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಕಿತ್ತೂರ ತಾಲೂಕಿನ ಹಳ್ಳಿಗಳಾದ ಹಿರೇಮುನವಳ್ಳಿ, ಚಿಕ್ಕಮುನವಳ್ಳಿ, ಗಾಡಿಕೊಪ್ಪ, ಜಿಕನೂರ, ಪಾರಿಶ್ವಾಡ, ಇಟಗಿ, ಬೋಗೂರ, ಬೇಡರಹಟ್ಟಿ, ಹಿರೇಹಟ್ಟಿಹೊಳಿ, ಚಿಕ್ಕಹಟ್ಟಿಹೊಳಿ ಹಾಗೂ ಕರವಿನಕೊಪ್ಪ ಗ್ರಾಮಗಳಿಗೆ ವಿದ್ಯುತ್ ಕಡಿತ ಉಂಟಾಗಲಿದೆ. ಜತೆಗೆ ಈ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿಯೂ ವ್ಯತ್ಯಯವಾಗಲಿದೆ.

ಗಂದಿಗವಾಡ ಉಪಕೇಂದ್ರದಲ್ಲಿಯೂ ವಿದ್ಯುತ್ ವ್ಯತ್ಯಯ:
ಗಂದಿಗವಾಡ ಉಪಕೇಂದ್ರದ ಮೂಲಕ ಸರಬರಾಜು ಆಗುವ ಗಂದಿಗವಾಡ, ಹಿರೇಅಂಗ್ರೋಳ್ಳಿ, ಚಿಕ್ಕ ಅಂಗ್ರೊಳ್ಳಿ, ಹಂದೂರ, ಕೇರವಾಡ, ಹುಲಿಕೊತ್ತಲ, ಇಟಗಿ, ಬೋಗೂರ, ಬೇಡರಹಟ್ಟಿ, ತೊಲಗಿ, ಬಿಳಕಿ, ಅವರೊಳ್ಳಿ ಹಾಗೂ ಕಗ್ಗಣಗಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಪ್ರದೇಶಗಳಲ್ಲಿಯೂವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net