

ಚಾಮರಾಜನಗರ: ನಗರದ ಹೊರವಲಯದ ಮಾದಾಪುರ-ಕಿರಗಸೂರು ಗ್ರಾಮದ ಬಳಿ ಇರುವ ಕೇಂದ್ರೀಯ ವಿದ್ಯಾಲಯದ ಸಿಬಿಎಸ್‌ಇ 10ನೇ ತರಗತಿಯಲ್ಲಿ ಎಂ.ಇಂಪನಾಗೆ ಶೇ.97ರಷ್ಟು ಅಂಕ ಗಳಿಸಿದ್ದಾಳೆ. ಎಂ. ಮಹೇಶ್ ಹಾಗೂ ಪಿ.ಪವಿತ್ರಾ ದಂಪತಿ ಪುತ್ರಿಯಾಗಿರುವ ಎಂ.ಇಂಪನಾ 500ಕ್ಕೆ 485 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕ, ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.