ಎಂ.ಆರ್.ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ

16kglphoto-1
ಕೊಳ್ಳೇಗಾಲ ತಾಲೂಕಿನ ಕಾಮಗೆರೆಯ ಕೊಂಗರಹಳ್ಳಿ ಗ್ರಾಮದಲ್ಲಿ ಭಾನುವಾರ 30ಕ್ಕೂ ಹೆಚ್ಚು ಜನರು ಹನೂರು ಕ್ಷೇತ್ರದ ಜೆಡಿಎಸ್ ಟಿಕೆಟ್ ಅಭ್ಯರ್ಥಿ ಎಂ.ಆರ್. ಮಂಜುನಾಥ್ ಸಮ್ಮುಖದಲ್ಲಿ ಪಕ್ಷ ಸೇರಿದರು. ಶಿವಮೂರ್ತಿ, ಪ್ರಸಾದ್, ಗುರುಮಲ್ಲಪ್ಪ ಇತರರು ಇದ್ದರು.
Published on

ಕೊಳ್ಳೇಗಾಲ: ತಾಲೂಕಿನ ಕಾಮಗೆರೆಯ ಕೊಂಗರಹಳ್ಳಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರು ಹನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.

ಗ್ರಾಮದ ಗುರುಸ್ವಾಮಿ ಎಂಬುವವರ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಂಜುನಾಥ್ ಮಾತನಾಡಿ, ಹನೂರು ಕ್ಷೇತ್ರದ ಜನರು ದುಡಿಮೆಗಾಗಿ ಮಹಾ ನಗರಳತ್ತ ಗುಳೆ ಹೋಗಿದ್ದಾರೆ. ನನ್ನದೊಂದು ಆಸೆ ಇದೆ. ಒಂದು ದೊಡ್ಡ ಕಾರ್ಖಾನೆ ತೊರೆದು ಯುವಕರಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ನೀಡಬೇಕೆಂದು. ಅದಕ್ಕಾಗಿ ನನಗೊಂದ ಅವಕಾಶ ನೀಡಬೇಕು. ಒಂದು ವೇಳೆ ನುಡಿದಂತೆ ನಡೆಯದಿದ್ದರೆ ನನ್ನನ್ನು ತಿರಸ್ಕರಿಸಿ ಎಂದರು.
ಜೆಡಿಎಸ್ ಸೇರ್ಪಡೆಗೊಂಡ ಕಿರಣ್ ಮಾತನಾಡಿ, ರಾಷ್ಟ್ರೀಯ ಪಕ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಅಭಿವದ್ಧಿ ಹಾಗೂ ಜನರ ಆಶಯಗಳು ಈಡೇರಬೇಕೆಂದರೆ ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಎಂದು ತಿಳಿದು ಜೆಡಿಎಸ್ ಸೇರಿದ್ದೇವೆ ಎಂದು ತಿಳಿಸಿದರು.

ಕಿರಣ್, ಮೂರ್ತಿ, ನಾಗೇಂದ್ರ, ಮಾದಪ್ಪ, ಕೀರ್ತಿ, ವೀರಪ್ಪ, ಪ್ರವೀಣ್, ಸುರೇಶ್, ನಾಗರಾಜು, ನಾಗೇಂದ್ರ, ಶೆಟ್ಟಿ ಪ್ರಸಾದ್, ಮಧು ಸೇರಿದಂತೆ ಇತರರು ಜೆಡಿಎಸ್ ಸೇರ್ಪಡೆಗೊಂಡರು.

ಮಾಜಿ ಜಿಪಂ ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಚಾಮುಲ್ ನಿರ್ದೇಶಕ ಪ್ರಸಾದ್, ಗುರುಮಲ್ಲಪ್ಪ, ಮುಖಂಡರಾದ ಸಿ.ಎಂ ಕೃಷ್ಣಮೂರ್ತಿ, ಬಸವಣ್ಣ, ಜಿಪಂ ಮಾಜಿ ಸದಸ್ಯ ಬಾಬು, ತೆಳ್ಳನೂರು ಪುಟ್ಟಮಾದಯ್ಯ, ಸುರೇಶ್, ಜಾಕೂಬ್, ಮಂಜೇಶ್ ಗೌಡ, ಮಂಜು ಸತ್ತೇಗಾಲ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net