

ವಿಜಯವಾಣಿ ಸುದ್ದಿಜಾಲ ಧಾರವಾಡ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸವದತ್ತಿ ರಸ್ತೆಯ ಮುರುಘಾಮಠದ ಬಳಿಯ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಸುಪ್ರಿಯಾ ಸಂಗನ್ನವರ ಶೇ. 96.67 ಕಾಲೇಜಿಗೆ ಪ್ರಥಮ ಮತ್ತು ಜಿಲ್ಲೆಗೆ 7ನೇ ರ‍್ಯಾಂಕ್, ಯಶೋಧಾ ಸಿರಸಂಗಿ ಶೇ. 85.33 ದ್ವಿತೀಯ, ಪರಶುರಾಮ ಕೋನೆರಿ ಶೇ. 83.83 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ನಾಗವೇಣಿ ಸತ್ತೂರ ಹಾಗೂ ಪ್ರಗತಿ ಕುಲಕರ್ಣಿ ಶೇ. 87.50 ಅಂಕ ಪಡೆದು ಪ್ರಥಮ, ಮೆಹಬೂಬಿ ಧಾರವಾಡ ಶೇ. 86.17 ದ್ವಿತೀಯ ಹಾಗೂ ಪವಿತ್ರಾ ಕಮ್ಮಾರ ಶೇ. 83.83 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ.