ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಗೆ ಸಿಟಿ ಸ್ಕ್ಯಾನಿಂಗ್ ಹಾಗೂ ಎಂ ಆರ್ ಐ ವರದಿ ಬಳಿಕ ಶಸ್ತ್ರಚಿಕಿತ್ಸೆ ಒಳಪಡಿಸಲು ನಿರ್ಧಾರಿಸಲಾಗುವುದು ಎಂದು ಮೂಲಗಳು ತಿಳಿಸಿದವು.
ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಕೆಲ ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆ ಆರ್ಥೊಪೆಡಿಕ್ ಹಾಗೂ ನ್ಯೋರೋ ಸರ್ಜನ್ ತಪಾಸಣೆ ನಡೆಸಿದ ಬಳಿಕ ಈ ಎರಡು ವರದಿ ಆಧಾರಿಸಿ ಸರ್ಜರಿ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ದರ್ಶನ್ ಸಿಟಿ ಸ್ಕ್ಯಾನಿಂಗ್ ಹಾಗೂ ಎಂ ಆರ್ ಐಗೆ ನಿರಾಕರಿಸಿದ್ದು, ಕೇವಲ ನೋವಿನ ಮಾತ್ರೆಗಳನ್ನು ನೀಡಿ ಎಂದು ಜೈಲು ಅಧಿಕಾರಿಗಳ ಬೇಡಿಕೆ ಇಡಲಾಗಿದೆ. ಸರ್ಜರಿ ಮಾಡಿಸಿಕೊಳ್ಳುವ ಅವಶ್ಯಕತೆ ಎನಿಸಿದರೆ, ಬೆಂಗಳೂರಿಗೆ ಶಿಫ್ಟ್ ಆಗುವ ಸಾಧ್ಯತೆಯಿದೆ. ಇದಕ್ಕೆ ಕೋರ್ಟ್ ಅನುಮತಿ ಪಡೆಯಬೇಕಾದ ಅನಿವಾರ್ಯತೆ ದರ್ಶನ್ ಗೆ ಇದೆ.