ಎ.ಸಿ ಸ್ಫೋಟ ಪ್ರಕರಣ, ಓರ್ವ ಸಾವು

Published on

ಬಳ್ಳಾರಿ : ಇಲ್ಲಿನ ಕಲ್ಯಾಣ್‌ ಜ್ಯುವೆಲರ್ಸ್‌ ಆಭರಣ ಮಳಿಗೆಯಲ್ಲಿ ಸಂಭವಿಸಿದ್ದ ಹವಾನಿಯಂತ್ರಣ ಯಂತ್ರ (ಎ.ಸಿ) ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸೈಯದ್‌ ಮೊಹಮದ್‌ ತಬ್ರೆಜ್‌ (26) ಮಂಗಳವಾರ ಮೃತಪಟ್ಟಿದ್ದಾರೆ. ಮೇ 2ರಂದು ನಡೆದಿದ್ದ ಸ್ಫೋಟದಲ್ಲಿ ತಬ್ರೆಜ್‌ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ವಿಮ್ಸ್ ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net