ಎ.ಕೆ.ಫ್ರೆಂಡ್ಸ್ ತಂಡಕ್ಕೆ ಜಯ

1 gkp 05
ಮಲ್ಲೇಂಗಡ ಬೆಳ್ಯಪ್ಪ ಸ್ಮಾರಕ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿ ವಿಜೇತ ಎ. ಕೆ. ಫ್ರೆಂಡ್ಸ್ ತಂಡ .
Published on

ಗೋಣಿಕೊಪ್ಪ: ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಮಲ್ಲೇಂಗಡ ಬೆಳ್ಯಪ್ಪ ಸ್ಮಾರಕ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಯನ್ನು ಎ.ಕೆ. ಫ್ರೆಂಡ್ಸ್ ತಂಡ ಗೆದ್ದುಕೊಂಡಿತು. ಹುದಿಕೇರಿ ಎ. ಜೆ. ಫ್ರೆಂಡ್ಸ್ ದ್ವಿತೀಯ ತಂಡವಾಗಿ ಹೊರ ಹೊಮ್ಮಿತು.

ಮಂಗಳವಾರ ಆಯೋಜಿಸಿದ್ದ ಫೈನಲ್ ಹಣಾಹಣಿಯಲ್ಲಿ ಎ.ಕೆ. ಫ್ರೆಂಡ್ಸ್ ತಂಡವು 22ರನ್‌ಗಳಿಂದ ಜಯಿಸಿತು. 65 ರನ್‌ಗಳ ಗುರಿ ಬೆನ್ನೆತ್ತಿದ ಎ.ಜೆ. ಫ್ರೆಂಡ್ಸ್ 43 ರನ್ ಗಳಿಸಿತು. 17 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದವು. ದಾನಿ ಮಲ್ಲೇಂಗಡ ಅಯ್ಯಪ್ಪ, ಕಾರ್ಯಪ್ಪ ಬಹುಮಾನ ವಿತರಣೆ ಮಾಡಿದರು. ಸ್ಥಳೀಯರಾದ ಮಲ್ಲೇಂಗಡ ಪೂಣಚ್ಚ, ಕವನ್, ಕೊಣಿಯಂಡ ಸಂಜು ಸೋಮಯ್ಯ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಶಾಂತಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net