ಎ.ಆರ್. ಕೃಷ್ಣಮೂರ್ತಿಗೆ ಎಲ್ಲೆಡೆ ಸ್ಪಂದನೆ

06 yelandur 02
ಯಳಂದೂರು ತಾಲೂಕಿನ ಅಂಬಳೆ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಮತಯಾಚನೆ ಮಾಡಿದರು. ಜೆ.ಯೋಗೇಶ್, ಎಚ್.ವಿ.ಚಂದ್ರು, ಡಿ.ಎನ್.ನಟರಾಜು ಇತರರು ಇದ್ದರು.
Published on

ಯಳಂದೂರು: ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರಿಗೆ ಕ್ಷೇತ್ರದ ಎಲ್ಲ ಕಡೆಯೂ ಉತ್ತಮ ಸ್ಪಂದನೆ ಲಭಿಸುತ್ತಿದ್ದು, ರಾತ್ರಿಯಲ್ಲೂ ಸ್ವಯಂ ಪ್ರೇರಿತರಾಗಿ ಜನರು ಭಾಗವಹಿಸುವ ಮೂಲಕ ಉತ್ತಮ ಬೆಂಬಲ ಸೂಚಿಸುತ್ತಿದ್ದಾರೆ.

ಶುಕ್ರವಾರ ರಾತ್ರಿ ಪ್ರಚಾರದ ವೇಳೆ ತಾಲೂಕಿನ ಕಂದಹಳ್ಳಿ, ಅಂಬಳೆ, ಅಂಬಳೆ-2, ಚಂಗಚಹಳ್ಳಿ, ವೈ.ಕೆ.ಮೋಳೆ ಗ್ರಾಮಗಳಲ್ಲಿ ಜನಜಾತ್ರೆಯೇ ನರೆದಿತ್ತು. ಈ ಸಂದರ್ಭದಲ್ಲಿ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಮತಯಾಚನೆ ಮಾಡಿದರು.

ಕ್ಷೇತ್ರದಲ್ಲಿ ಈ ಬಾರಿ ನನಗೆ ಉತ್ತಮ ಸ್ಪಂದನೆ ಲಭಿಸುತ್ತಿದೆ. ಜನರ ಆಯ್ಕೆ ಈ ಬಾರಿ ಕಾಂಗ್ರೆಸ್ ಆಗಿದೆ. ಕ್ಷೇತ್ರದ ಜನರು ಅಭಿವೃದ್ಧಿಗಾಗಿ ಹಾತೊರೆಯುತ್ತಿದ್ದಾರೆ. ಕಳೆದ 5 ವರ್ಷಗಳಿಂದಲೂ ಇಲ್ಲಿನ ಅಭಿವೃದ್ಧಿ ಶೂನ್ಯವಾಗಿದೆ. ಕಳೆದ 6 ಚುನಾವಣೆಗಳಲ್ಲೂ ನಾನು ಸೋತಿದ್ದೇನೆ. ಒಂದು ಮತದ ಸೋಲು ನನ್ನನ್ನು ಬಾಧಿಸುತ್ತಿದೆ. ಈ ಬಾರಿ ಮತದಾರರು ನನ್ನ ಮೇಲೆ ಅನುಕಂಪ ಇಟ್ಟಿದ್ದಾರೆ. ಹಾಗಾಗಿ ಈ ಬಾರಿ ಚುನಾವಣೆಯನ್ನು ಗೆಲ್ಲುವ ವಿಶ್ವಾಸವಿದೆ. ಇದಕ್ಕೆ ಸಾಕ್ಷಿ ಎಂಬಂತೆ ಎಲ್ಲೆಡೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಎ.ಆರ್. ಕೃಷ್ಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಬ್ಲಾಕ್ ಕಾಂಗ್ರೆಸ್ ಎಚ್.ವಿ.ಚಂದ್ರು, ಡಿ.ಎನ್.ನಟರಾಜು, ಅಂಬಳೆ ಶಿವಾನಂದಸ್ವಾಮಿ, ಸಿದ್ಧನಾಯಕ, ಪ್ರತಾಪ್, ಕಂದಹಳ್ಳಿ ನಂಜುಂಡಸ್ವಾಮಿ, ಚೇತನ್, ಗಣಿಗನೂರು ಬಂಗಾರು, ವೈ.ಕೆ.ಮೋಳೆ ನಾಗರಾಜು, ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net