ಎ.3ರಿಂದ ರಾಮಕೃಷ್ಣ ಮಠದಲ್ಲಿ ಯೋಗಾಸನ ಶಿಬಿರ

Published on

ಮಂಗಳೂರು : ನಗರದ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಎ.3ರಿಂದ ಸಾಯಂಕಾಲ 5.30ರಿಂದ 7ರವರೆಗೆ ಯೋಗಾಸನ ಶಿಬಿರ ನಡೆಯಲಿದೆ. ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ ಅವರು ಯೋಗಾಸನ, ಮುದ್ರೆಗಳು, ಕ್ರಿಯೆಗಳು, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ ಮಾಡುವ ವಿಧಾನ ತಿಳಿಸಿಕೊಡುವರು. ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು. ಹೆಚ್ಚಿನ ವಿವರಗಳಿಗಾಗಿ 0824-2414412 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net