

ಕಲಬುರಗಿ: ಜಗತ್ತಿನ ಎಲ್ಲ ಜೀವಿಗಳ ಒಳಿತು ಬಯಸುವ ಹಾಗೂ ಎಲ್ಲರನ್ನು ಸಹೋದರರಂತೆ ಕಾಣುವ ಶ್ರೇಷ್ಠ ಪರಂಪರೆ ಭಾರತದದ್ದಾಗಿದೆ. ಋಷಿ-ಮುನಿಗಳ ಪರಂಪರೆಯಲ್ಲಿ ಜನಿಸಿರುವುದೇ ನಮ್ಮ ಸೌಭಾಗ್ಯ ಎಂದು ಬಾಳಗಾರು ಮಠದ ಪೀಠಾಧಿಪತಿ ಶ್ರೀ ಅಕ್ಷೆಭ್ಯರಾಮಪ್ರಿಯ ತೀರ್ಥರು ನುಡಿದರು.
ಸಂಗಮೇಶ್ವರ ಬಡಾವಣೆಯಲ್ಲಿನ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಧರ್ಮ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡಿ, ಪ್ರಾಚೀನ ವೇದ, ವೈದಿಕ ಶಾಖೆಗಳನ್ನು ಬೆಳೆಸಿದ ಅನೇಕ ಋಷಿಮುನಿಗಳು ನಮ್ಮ ಪರಂಪರೆಯಲ್ಲಿ ಆಗಿ ಹೋಗಿz್ದÁರೆ. ಮಾನವರಾದ ನಾವು ಕಷ್ಟ ಅನುಭವಿಸಿ ಸಹಿಸಿಕೊಳ್ಳಬೇಕು. ನಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ದೇಹ ಮತ್ತು ಮನಸ್ಸನ್ನು ಭಗವಂತನ ಸೇವೆಯಲ್ಲಿ ತೊಡಗಿಸಬೇಕು ಎಂದು ಕರೆ ನೀಡಿದರು.
ಶ್ರೀಯಾಜ್ಞವಲ್ಕö್ಯ ಸೇವಾ ಸಮಿತಿ ಅಧ್ಯP್ಷÀ ಮಲ್ಹಾರಾವ್ ಕುಲಕರ್ಣಿ ಗಾರಂಪಳ್ಳಿ, ಹಿರಿಯರಾದ ಚಂದ್ರಕಾAತ ಗದಾರ್, ಶಾಮಾಚಾರ್ಯ ಬೈಚಬಾಳ್, ಅಶೋಕ ಮಳ್ಳಿ, ಭೀಮರಾವ್ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಶಾಮಾಚಾರ್ಯ ಜೋಶಿ ವನದುರ್ಗ, ಸುಧೀರ ಕುಲಕರ್ಣಿ, ರಾಮಾಚಾರ್ಯ, ಮಂಜುನಾ ಕುಲಕರ್ಣಿ, ಶ್ರೀಧರ ಕುಲಕರ್ಣಿ, ವಿನುತ ಜೋಶಿ, ಮಾರ್ಥಂಡ ಹೇಮನೂರ್, ವಾಸುದೇವರಾವ ಸಿಂಧಗೇರಿ, ಅಶ್ವಥ್ ಜೋಶಿ, ದತ್ತಾತ್ರೆಯ ಸಬ್ನವಿಸ್, ಅವಧೂತ ಕುಲಕರ್ಣಿ, ಮೈತ್ರಿ ಭಜನಾ ಮಂಡಳಿ ಮಾತೆಯರು ಇದ್ದರು.