ಋತುಚಕ್ರ ಜೀವನದ ಸಹಜ ಕ್ರಿಯೆ

23 tth 4
ಕೋಣಂದೂರು ರೋಟರಿ ಕ್ಲಬ್‌ನಿಂದ ವೈದ್ಯೆ ಎಚ್.ಎಸ್.ರಕ್ಷಾ ಅವರನ್ನು ಗೌರವಿಸಲಾಯಿತು. ಕೆ.ಆರ್.ಸದಾಶಿವ, ಬಿ.ಟಿ.ಈಶ್ವರಪ್ಪ, ಡಿ.ಆರ್.ಗಿರೀಶ್ ಇತರರಿದ್ದರು.
Published on

ತೀರ್ಥಹಳ್ಳಿ: ಮುಟ್ಟು ಎಂಬುದು ಮಹಿಳೆಯರ ಜೀವನದ ಸಹಜ ಕ್ರಿಯೆ. ಈ ವಿಚಾರದಲ್ಲಿ ಮಡಿವಂತಿಕೆ ಸಲ್ಲದು ಎಂದು ಡಾ. ಎಚ್.ಎಸ್.ರಕ್ಷಾ ಹೇಳಿದರು.

ಕೋಣಂದೂರು ರೋಟರಿ ಕ್ಲಬ್‌ನಿಂದ ನವಜ್ಯೋತಿ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ ಮತ್ತು ವೃತ್ತಿ ಮಾರ್ಗದರ್ಶನ ಕುರಿತು ಉಪನ್ಯಾಸ ನೀಡಿದರು.

ಸಹಜ ಮತ್ತು ಅಸಹಜ ಋತು ಚಕ್ರ ಕುರಿತು ಹದಿಹರೆಯದ ಮಕ್ಕಳಿಗೆ ಪಾಲಕರು ಮತ್ತು ಶಾಲೆಯಲ್ಲಿ ಶಿಕ್ಷಕಿಯರು ತಿಳಿಹೇಳಬೇಕು. ಸ್ವಚ್ಛತೆ ವಿಚಾರದಲ್ಲಿ ಜಾಗ್ರತೆ ವಹಿಸಬೇಕು. ಭವಿಷ್ಯದಲ್ಲಿ ನೀವು ಗಳಿಸುವ ಅಂಕಗಳು ಉತ್ತಮ ಅವಕಾಶಗಳಿಗೆ ಕಾರಣವಾಗಬಹುದು. ಆದರೆ ನಿಮ್ಮ ವರ್ತನೆ ನಿಮ್ಮನ್ನು ಆಯಾ ಕ್ಷೇತ್ರದಲ್ಲಿ ಬಲುದೂರ ಕೊಂಡೊಯ್ಯುತ್ತದೆ. ಪ್ರಾಮಾಣಿಕತೆ, ಕಠಿಣ ಶ್ರಮ ಯಶಸ್ಸಿನ ಮೂಲ ಮಂತ್ರಗಳು ಎಂದರು.

ಕ್ಲಬ್ ಅಧ್ಯಕ್ಷ ಕೆ.ಆರ್.ಸದಾಶಿವ, ಕಾರ್ಯದರ್ಶಿ ಬಿ.ಟಿ.ಈಶ್ವರಪ್ಪ, ಡಿ.ಆರ್.ಗಿರೀಶ್, ಎಚ್.ಎಂ.ಸುರೇಶ್, ಎಂ.ಟಿ.ಪುಟ್ಟಪ್ಪ, ಮುಖ್ಯ ಶಿಕ್ಷಕಿ ಬಿನೆಟ್, ಶಿಕ್ಷಕ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net