

ಕಡೂರು: ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಹುಟ್ಟೂರಿನ ಮೇಲಿನ ಅಭಿಮಾನ ಮರೆಯಬಾರದು ಎಂದು ಉದ್ಯಮಿ ಎಂ.ವಿ.ರಂಗನಾಥ್ ತಿಳಿಸಿದರು.
ಎಸ್.ಮಾದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ವಿದ್ಯಾರ್ಥಿಗಳಿಗೆ ಪಠ್ಯ ಸಾಮಗ್ರಿ ಶನಿವಾರ ವಿತರಿಸಿ ಮಾತನಾಡಿ, ಬೆಂಗಳೂರಿನಲ್ಲಿ ನೆಲೆಸಿದ್ದರೂ ಹುಟ್ಟೂರಿನ ನೆನಪು ಸದಾ ಕಾಡುತ್ತಿರುತ್ತದೆ. ನಾವು ಎಷ್ಟೇ ಎತ್ತರಕ್ಕೆ ಬೆಳೆದರು ಹುಟ್ಟೂರನ್ನು ಮರೆಯಬಾರದು ಎನ್ನುವ ಕಾರಣಕ್ಕೆ ನಮ್ಮೂರಿನ ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆಯಾಗಿ ನೀಡಲಾಗುತ್ತಿದೆ. ಜತೆಗೆ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್‌ಬುಕ್ ವಿತರಿಸಲಾಗಿದೆ ಎಂದು ಹೇಳಿದರು.
ಶಾಲೆಯ ಹಳೆಯ ವಿದ್ಯಾರ್ಥಿ ಎಂ.ಎಚ್.ಸುನೀಲ್ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಲು ಹಣಕ್ಕಿಂತ ಒಳ್ಳೆಯ ಮನಸ್ಸು ಇರಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಲು ಇನ್ನಷ್ಟು ದಾನಿಗಳು ಮುಂದೆ ಬರಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ್ಷ ಎಂ.ಜೆ.ನಾಗರಾಜ್, ಉಪಾಧ್ಯಕ್ಷೆ ನಾಗರತ್ನಾ, ಸದಸ್ಯೆ ಕಲಾವತಿ, ಮುಖ್ಯಶಿಕ್ಷಕಿ ಎಸ್.ಬಿ.ಸುಮಾ, ಸುಷ್ಮಿತಾ ರಂಗನಾಥ್, ಗ್ರಾಮದ ಎಂ.ವಿ.ವಿಶ್ವನಾಥ್, ಶಿಕ್ಷಕರು ಮತ್ತು ಪಾಲಕರು ಇದ್ದರು.