ಊರಿಗೆ ಹೋದಾಗ ಮನೆಯಲ್ಲಿ ಚಿನ್ನಾಭರಣ ಕಳ್ಳತನ

This is masked man robber with stolen gold.
This is masked man robber with stolen gold.
Published on

ಮೈಸೂರು: ಕೂರ್ಗಳ್ಳಿ ಗ್ರಾಮದ ಶಿವನಗರದ ಟಿ.ಎಸ್.ರವಿ ಅವರ ಮನೆಯಲ್ಲಿ 5.30 ಲಕ್ಷ ನಗದು ಹಾಗೂ 3.28 ಲಕ್ಷ ರೂ. ಮೌಲ್ಯದ 41 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.

ಹೆಬ್ಬಾಳ ಮುಖ್ಯರಸ್ತೆ ಸಂಜೀವಿನಿ ವೃತ್ತದ ಬಳಿ ಗೋಬಿ ಅಂಗಡಿ ಇಟ್ಟುಕೊಂಡಿರುವ ರವಿ ಅವರು ಕುಟುಂಬದ ಸಹಿತ ಗ್ರಾಮ ದೇವತೆ ಹಬ್ಬಕ್ಕೆಂದು ಹೊಳೆನರಸೀಪುರ ತಾಲೂಕಿನಲ್ಲಿರುವ ಸ್ವಗ್ರಾಮ ತಿಪ್ಪನಕೊಪ್ಪಲಿಗೆ ತೆರಳಿದ್ದರು.

ಇವರು ಮೇ 25ರಂದು ವಾಪಸ್ ಬಂದಾಗ ಮುಂಭಾಗಿಲಿನ ಬೀಗ ಮುರಿದಿತ್ತು. ಗಾಬರಿಯಿಂದ ಒಳಹೋಗಿ ನೋಡಿದಾಗ ಕಬೋರ್ಡ್‌ನಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿತ್ತು.

ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net