ಊರ ಹಬ್ಬ ಇಂದು

Kanyakaparameshwaridevi
Published on

ಚಿತ್ರದುರ್ಗ: ನಗರದ ವಾಸವಿ ಮಹಲ್ ರಸ್ತೆಯ ಕನ್ಯಕಾಪರಮೇಶ್ವರಿ ದೇಗುಲದಲ್ಲಿ ನ. 5ರಂದು ಜೈ ವಾಸವಿ ಮಿತ್ರ ವೃಂದ, ಆರ್ಯವೈಶ್ಯ ಸಂಘದಿಂದ ಮಿತ್ರ ವೃಂದದ 14ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಊರ ಹಬ್ಬ, 11 ಶಕ್ತಿದೇವತೆಗಳ ಸಮಾಗಮ ಹಮ್ಮಿಕೊಳ್ಳಲಾಗಿದೆ.

ಕನ್ಯಕಾಪರಮೇಶ್ವರಿ, ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಗೌರಸಂದ್ರ ಮಾರಮ್ಮ, ಬರಗೇರಮ್ಮ, ಕಾಳಿಕಮಠೇಶ್ವರಿ, ದುರ್ಗಾದೇವಿ, ಬುಡ್ಡಾಂಬಿಕೆ, ಬನಶಂಕರಿ, ಚೇಳುಗುಡ್ಡ ಗೌರಸಂದ್ರ ಮಾರಮ್ಮ, ದೊಡ್ಲ ಮಾರಮ್ಮ ದೇವಿಯರ ಭವ್ಯ ಮೆರವಣಿಗೆ ಬೆಳಗ್ಗೆ 8ಕ್ಕೆ ಸಿಹಿನೀರು ಹೊಂಡದಿಂದ ಆರಂಭವಾಗಲಿದೆ.

ಬೆಳಗ್ಗೆ 10ರಿಂದ ಸಂಜೆ 6ರವರೆಗೂ ಕನ್ಯಕಾಪರಮೇಶ್ವರಿ ದೇಗುಲದಲ್ಲಿ ದೇವತೆಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 12ರ ನಂತರ ಭಕ್ತರಿಗಾಗಿ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಎಂ.ಕೆ.ವೆಂಕಟೇಶ್‌ಮೂರ್ತಿ, ಗೌರವಾಧ್ಯಕ್ಷ ಎಸ್.ಎಸ್.ಕಾಶಿವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net