

ಮಂಗಳೂರು: ರಾಸಾಯನಿಕ ಮುಕ್ತ ಆಹಾರವನ್ನು ನಾವು ಸೇವಿಸಬೇಕಾದರೆ ನಮ್ಮ ಊಟದ ಬಟ್ಟಲಿಗೆ ನಮ್ಮ ಮನೆಯಲ್ಲೇ ಬೆಳೆದ ತರಕಾರಿಯ ಅಗತ್ಯವಿದೆ ಎಂದು ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಪ್ರದೀಪ್ ಸೂರಿ ಹೇಳಿದರು.
ನಗರದ ವಿಶ್ವವಿದ್ಯಾಲಯ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ಕಾಲೇಜಿನ ನಿಸರ್ಗ, ವಿಜ್ಞಾನ ಮತ್ತು ಆವಿಷ್ಕಾರ ಸಂಘದ ವತಿಯಿಂದ ನಡೆದ ತಾರಸಿಯಲ್ಲಿ ತರಕಾರಿ ಉದ್ಯಾನ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲೆ ಡಾ.ಅನಸೂಯಾ ರೈ ಅಧ್ಯಕ್ಷತೆ ವಹಿಸಿದ್ದರು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಉಷಾ ಕೆ.ಎಂ., ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಇಂದಿರಾ ಜೆ., ಪ್ರಾಣಿಶಾಸ್ತ್ರ ವಿಭಾಗ ಉಪನ್ಯಾಸಕಿ ಡಾ.ಕೆ.ಎ.ನಾಗರತ್ನಾ, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಅರುಣಾ ಕುಮಾರಿ, ಸ್ನಾತಕೋತ್ತರ ರಾಸಾಯನ ಶಾಸ್ತ್ರ ವಿಭಾಗದ ಡಾ.ಲಕ್ಷ್ಮಣ್ ಕೆ., ವಾಣಿಜ್ಯ ವಿಭಾಗದ ಉಪನ್ಯಾಸಕಿ ವಂದನಾ, ಐಕ್ಯುಎಸಿ ಸಂಯೋಜಕ ಡಾ.ಸಿದ್ದರಾಜು ಎಂ.ಎನ್.ಉಪಸ್ಥಿತರಿದ್ದರು.
ಡಾ.ಸಂಜಯ್ ಅಣ್ಣಾರಾವ್ ಸ್ವಾಗತಿಸಿ, ತಸ್ಮೈ ವಂದಿಸಿದರು. ಸುಮಾ ಕಾರ್ಯಕ್ರಮ ನಿರೂಪಿಸಿದರು.