ಊಟಕ್ಕೆ ಹೋಗಿದ್ವಿ, ಭಿನ್ನಮತರ ಸಭೆ ಅಲ್ಲ

siddu savadi mar 20
Published on

ತೇರದಾಳ: ಹೋಟೆಲ್‌ಗಳು ಬಂದ್ ಇದುದ್ದರಿಂದ ಉಮೇಶ ಕತ್ತಿ ಅವರು ಊಟಕ್ಕೆ ಕರೆದಿದ್ದರು. ಊಟಕ್ಕೆ ಹೋಗಿದ್ದು ನಿಜ. ಆದರೆ, ಭಿನ್ನಮತರ ಸಭೆಯಲ್ಲ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಉಮೇಶ ಕತ್ತಿ ನಡೆಸಿದ ಬಿಜೆಪಿಯ ಆಯ್ದ ಶಾಸಕರ ಸಭೆಯಲ್ಲಿ ಪಾಲ್ಗೊಂಡ ಕುರಿತು ಸವದಿ ಅವರನ್ನು ವಿಚಾರಿಸಿದಾಗ ‘ಭಿನ್ನಮತ ಅಂತ ಏನೂ ಇಲ್ಲ. ಹೋಟೆಲ್‌ಗಳು ಬಂದ್ ಆಗಿದ್ದರಿಂದ ಉಮೇಶ ಕತ್ತಿ ಅವರು ಊಟಕ್ಕೆ ಕರೆದಿದ್ದರು. ಊಟಕ್ಕೆ ಹೋಗಿದ್ದು ನಿಜ’ ಎಂದು ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ, ಪಕ್ಷ ಅಂದ ಮೇಲೆ ಕೆಲವೊಂದು ಸಣ್ಣಪುಟ್ಟ ಅಸಮಾಧಾನಗಳು ಸಹಜ. ನನ್ನ ಕ್ಷೇತ್ರದಲ್ಲಿ ನೇಕಾರರ ಸಮಸ್ಯೆ ತೀವ್ರವಾಗಿದೆ. ಅವರಿಗೆ ಪರಿಹಾರ ಹೆಚ್ಚಿನ ಸಂಖ್ಯೆಯಲ್ಲಿ ನೀಡಬೇಕೆಂಬುದು ನನ್ನ ಒತ್ತಾಯ’ ಎಂದು ಹೇಳುವ ಮೂಲಕ ಸಿಎಂ ಮೇಲೆ ಅಸಮಾಧಾನ ಇರುವುದನ್ನು ಬಹಿರಂಗ ಪಡಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net