ಉಳ್ಳಾಲದಲ್ಲಿ ಹನಿಟ್ಯ್ರಾಪ್ ಇಬ್ಬರ ಬಂಧನ

IMG-20210728-WA0023
Published on


ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹನಿಟ್ರಾೃಪ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ನಗರದ ಇಂಪಾಲ ಅಪಾರ್ಟ್‌ಮೆಂಟ್ ನಿವಾಸಿ ಅಝ್ವೀನ್ (24) ಹಾಗೂ ಈತನ ಗೆಳತಿ ಜೋಕಟ್ಟೆಯ ಹತೀಜಮ್ಮ (23) ಬಂಧಿತರು. ಜು.19ರಂದು ಪರಿಚಯದವರೊಬ್ಬರ ಮನೆಗೆ ಬಂದ ಆರೋಪಿಗಳು ಪಾರ್ಟಿ ಮಾಡುವ ನೆಪದಲ್ಲಿ ಜ್ಯೂಸ್ ಜತೆ ಅಮಲು ಪದಾರ್ಥ ಹಾಕಿ ಕೊಟ್ಟಿದ್ದಾರೆ. ಅದನ್ನು ಕುಡಿದ ಮನೆಯ ಮಾಲೀಕ ಮೂರ್ಛೆ ಹೋಗಿದ್ದರು. ಎಚ್ಚರಗೊಂಡಾಗ ವಿವಸ್ತ್ರಗೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದರು.
ಮನೆಯಲ್ಲಿದ್ದ 2.12 ಲಕ್ಷ ರೂ., ಕೈಯ್ಯಲ್ಲಿದ್ದ ನವರತ್ನದ ರಿಂಗ್ ಕಳವು ಮಾಡಿಕೊಂಡು ಹೋಗಿದ್ದರು. ಮರುದಿನ ಅಝ್ವೀನ್ ಮನೆಗೆ ಹೋಗಿ ಪೊಲೀಸ್ ದೂರು ನೀಡುವುದಾಗಿ ಹೇಳಿದಾಗ ಆತ ಮೊಬೈಲ್‌ನಲ್ಲಿದ್ದ ನಗ್ನ ಫೋಟೊ, ವಿಡಿಯೋ ತೋರಿಸಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ತಂಗಿಯ ಬಲಾತ್ಕಾರಕ್ಕೆ ಯತ್ನಿಸಿದ್ದಾಗಿ ಆಕೆಯ ಮೂಲಕ ದೂರು ದಾಖಲಿಸುವುದಾಗಿ ಹೇಳಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net