

ಜಿ.ಬಿ.ಹೆಸರೂರ ಶಿರಹಟ್ಟಿ
ಕಳೆದ 15 ದಿನಗಳಿಂದ ಸತತವಾಗಿ ಸುರಿದ ಮಳೆಯಿಂದ ಉಳ್ಳಾಗಡ್ಡಿ ಬೆಳೆ ಜಲಾವೃತಗೊಂಡಿದ್ದು, ಹೊಲದಲ್ಲಿಯೇ ಕೊಳೆಯುವ ಹಂತ ತಲುಪಿದೆ.
ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ. ಆರಂಭದಲ್ಲಿ ಉತ್ತಮವಾಗಿ ಬೆಳೆಯಿತು. ಇದರಿಂದ ರೈತರು ಹರ್ಷಿತರಾಗಿದ್ದರು. ಆದರೆ ವಿಪರೀತ ಮಳೆ ರೈತರನ್ನು ನಿರಾಸೆಗೊಳಿಸಿದೆ. ಎಡೆಬಿಡದ ಮಳೆಯು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುವ ಸಾಧ್ಯತೆ ಇದೆ.
ಈ ಭಾಗದಲ್ಲಿ ಪ್ರತಿ ವರ್ಷ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬಿತ್ತನೆ ಆಗá-ತ್ತದೆ. ಆದರೆ, ಯೋಗ್ಯ ಬೆಲೆ ಹಾಗೂ ಮಳೆ ಅವಾಂತರರಿಂದ ಸಾಕಪ್ಪ ಸಾಕು ಈರುಳ್ಳಿ ಸಹವಾಸ ಎಂಬಂತಾಗಿದೆ. ಕಳೆದ ವರ್ಷದ ಬಿತ್ತನೆ ಪ್ರಮಾಣವೂ ಕಡಿಮೆಯಾಗಿದೆ. ತಾಲೂಕಿನ ಮಾಗಡಿ, ಕಡಕೋಳ, ಛಬ್ಬಿ, ಬೆಳ್ಳಟ್ಟಿ, ಬನ್ನಿಕೊಪ್ಪ, ಹೆಬ್ಬಾಳ, ತಾರೀಕೊಪ್ಪ, ಮಾಚೇನಹಳ್ಳಿ, ತಂಗೋಡ ಗ್ರಾಮಗಳ 1,600 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಉಳ್ಳಾಗಡ್ಡಿ ಬಿತ್ತನೆಯಾಗಿದೆ.
ಸತತ ಮಳೆಗೆ ತೇವಾಂಶ ಹೆಚ್ಚಾಗಿ, ಭೂಮಿಯಲ್ಲಿ ಕೊಳೆಯುವ ಲಕ್ಷಣ ಕಾಣಿಸಿಕೊಂಡಿದೆ. ಎಕರೆಗೆ 20 ಸಾವಿರ ರೂಪಾಯಿ ಖರ್ಚು ಮಾಡಿ ಉತ್ತಮ ಆದಾಯದ ನೀರಿಕ್ಷೆಯಲ್ಲಿದ್ದ ಬೆಳೆಗಾರರ ಬದುಕು ಈಗ ಬೀದಿಗೆ ಬಿದ್ದಿದೆ.
ಕಳೆದ ವರ್ಷ ಕ್ವಿಂಟಾಲ್ಗೆ 4 ಸಾವಿರ ರೂಪಾಯಿ ವರೆಗೂ ಫಸಲು ಮಾರಾಟವಾಗಿತ್ತು. ಬೆಳೆಗಾರ ರೈತರು ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ಕೊಂಡೊಯ್ದು ಮಾರಾಟ ಮಾಡಿದ್ದರು. ಆದರೆ, ಈ ಬಾರಿ ದರ 3 ಸಾವಿರ ರೂಪಾಯಿಗೆ ಕುಸಿತ ಕಂಡಿದೆ.
‘ಫಸಲು ಬೆಳವಣಿಗೆಯ ಹಂತದಲ್ಲಿರುವುದರಿಂದ ಮಳೆಯಿಂದ ಪಾರಾಗಿ, ಉತ್ತಮ ಫಸಲು ಮತ್ತು ದರ ಕೈಗೆಟá-ಕಿದರೆ ಮಾತ್ರ ನಮ್ಮ ಶ್ರಮ ಸಾರ್ಥಕ’ ಎನ್ನ್ನುತ್ತಾರೆ ಈರುಳ್ಳಿ ಬೆಳೆಗಾರ.
ಬೆಳೆಹಾನಿ ಸಮೀಕ್ಷೆ ನಿಧಾನ: ಕಟಾವು ಹಂತಕ್ಕೆ ಬಂದಿರುವ ಉಳ್ಳಾಗಡ್ಡಿ ಕೊಳೆಯುವ ಹಂತ ತಲುಪಿದೆ. ಮಳೆ ನಿಂತು ಭೂಮಿಯಲ್ಲಿನ ತೇವಾಂಶ ಕಡಿಮೆಯಾದರೆ ಬೆಳೆ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಆದರೆ ಸರ್ಕಾರ ಈಗಾಗಲೇ ತೋಟಗಾರಿಕೆ ಇಲಾಖೆಗೆ ಮಾರ್ಗದರ್ಶನ ನೀಡಿ ಖುಷ್ಕಿ ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆ ಪ್ರತಿ ಹೆಕ್ಟೇರ್ ಹಾನಿಗೆ 13,600 ರೂಪಾಯಿ ಮತ್ತು ನೀರಾವರಿ ಆ್ರಶಿತ ಭೂಮಿಯಲ್ಲಿನ ಬೆಳೆಗೆ ಹೆಕ್ಟೇರ್ಗೆ 25 ಸಾವಿರ ರೂಪಾಯಿ ನಿಗದಿ ಮಾಡಿ ರೈತರಲ್ಲಿ ಆಸೆ ಮೂಡಿಸಿದೆ.
ಆದರೆ, ಅಧಿಕಾರಿಗಳು ಹೊಲಕ್ಕೆ ಹೋಗಿ ಬೆಳೆಹಾನಿ ಸಮೀಕ್ಷೆ ಸರಿಯಾಗಿ ನಡೆಸಿ ನಿಖರ ವರದಿ ಸರ್ಕಾರಕ್ಕೆ ಸಲ್ಲಿಸಿದಾಗ ಮಾತ್ರ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಪರಿಹಾರ ಹಣ ನೀಡಲಿದೆ. ಬೆಳೆಹಾನಿಯ ಸಮೀಕ್ಷೆ ತ್ವರಿತವಾಗಿ ಆಗಬೇಕು ಎಂಬá-ದು ರೈತರ ಒತಾಯ.
ಎಕರೆಗೆ 20 ಸಾವಿರ ರೂಪಾಯಿ ಖರ್ಚು ಮಾಡಿ ಉಳ್ಳಾಗಡ್ಡಿ ಬೆಳೆದಿದ್ದೇವೆ. ಮಳೆಯ ಅಬ್ಬರದಿಂದ ಹೊಲದಲ್ಲಿ ನೀರು ನಿಂತಿದೆ. ಬೆಳೆ ಜಲಾವೃತವಾಗಿದೆ. ಮಳೆ ಬಿಡá-ವು ನೀಡಿ, ಚೆನ್ನಾಗಿ ಬಿಸಿಲು ಬಿದ್ದರೆ ತೇವಾಂಶ ಕಡಿಮೆಯಾಗುತ್ತದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈರುಳ್ಳಿ ನೀರು ಪಾಲಾಗಲಿದೆ. ಕೊಳೆತ ಫಸಲು ಯಾರೂ ಖರೀದಿಸುವುದಿಲ್ಲ. ಮತ್ತೆ ಸಾಲದ ಸುಳಿಗೆ ಸಿಲುಕಿದರೂ ಅಚ್ಚರಿಯಿಲ್ಲ. ಸರ್ಕಾರ ನೀಡá-ವ ಪುಡಿಗಾಸು ಪರಿಹಾರ ಯಾವ ಪುರುಷಾರ್ಥಕ್ಕೆ ಹೇಳ್ರೀ? ಶಿವಪುತ್ರಪ್ಪ ಹೌಂಸಿ, ಬನ್ನಿಕೊಪ್ಪ
-ಶಿರಹಟ್ಟಿ ತಾಲೂಕಿನಲ್ಲಿ 1,600 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದು, ಈ ಪೈಕಿ 650 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಆದ ಬಗ್ಗೆ ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದ್ದು, ಪರಿಹಾರದ ಹಣ ಮಂಜೂರು ಆಗಲಿದೆ. ಸುರೇಶ ಕುಂಬಾರ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ