ಉರ್ದು ಶಾಲೆ ಬಾಗಿಲು ಮುರಿದು ಪಾರ್ಟಿ!: ಉಪ ಪೊಲೀಸ್​ ಠಾಣೆ, ಗ್ರಾಪಂ ಕಚೇರಿ ಇದ್ದರೂ ಕೃತ್ಯ

01
Published on

ಕೊರಟಗೆರೆ: ಕರ್ನಾಟಕ ಪಬ್ಲಿಕ್​ ಸ್ಕೂಲ್​ ಆವರಣದಲ್ಲಿರುವ ಉರ್ದು ಶಾಲೆಯ ಕೊಠಡಿಯೊಂದರ ಬಾಗಿಲು ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಮದ್ಯ ಸೇವಿಸಿ ಮೋಜು&ಮಸ್ತಿ ಮಾಡಿದ್ದಾರೆ.

ಶಾಲೆಯ ಪಕ್ಕದಲ್ಲೇ ಉಪ ಪೊಲೀಸ್​ ಠಾಣೆ, ಗ್ರಾಪಂ ಕಾರ್ಯಾಲಯಗಳು ಇವೆ. ಅಲ್ಲದೆ, ಇದು ಜನಸಂಚಾರ ಹೆಚ್ಚಿರುವ ಪ್ರದೇಶವಾಗಿದೆ. ಹೀಗಿದ್ದೂ ದುಷ್ಕರ್ಮಿಗಳು ಮದ್ಯ ಸೇವನೆಗಾಗಿ ಶಾಲೆಯ ಕೊಠಡಿ ಬಳಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಇಂಥ ಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ಕೂಡ ಸಾಕಷ್ಟು ಬಾರಿ ದುಷ್ಕರ್ಮಿಗಳು ಇಂಥ ಕೃತ್ಯ ಎಸಗಿದ್ದಾರೆ. ಶಿಕ್ಷಣ ಮತ್ತು ಪೊಲೀಸ್​ ಇಲಾಖೆಗೆ ದೂರು ಕೊಟ್ಟಿದ್ದರೂ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಶಾಲೆಗೆ ಬಂದೋಬಸ್ತ್​ ಏರ್ಪಡಿಸಬೇಕು ಎಂದು ಸ್ಥಳಿಯರು ಮನವಿ ಮಾಡಿಕೊಂಡಿದ್ದಾರೆ.

ಪ್ರತಿದಿನವೂ ಶಾಲೆಯಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ ಇದಾಗಿದೆ. ಶಾಲೆಯ ಆವರಣದಲ್ಲಿ ಮದ್ಯ ಸೇವನೆ ಮಾಡುವವರು ಎಲ್ಲೆಂದರಲ್ಲಿ ಬಾಟಲಿ, ಬೀಡಿ, ಸಿಗರೇಟ್​ ತುಂಡುಗಳು ಹಾಗೂ ಗುಟ್ಖಾ ಪಾಕೆಟ್​ಗಳನ್ನು ಬಿಸಾಡಿ ಹೋಗಿರುತ್ತಾರೆ. ತರಗತಿ ಆರಂಭವಾಗುವ ಮುನ್ನ ಇವೆಲ್ಲವನ್ನೂ ಸ್ವಚ್ಛಗೊಳಿಸಿ, ಪಾಠ ಪ್ರವಚನ ಕೇಳುವ ಅನಿವಾರ್ಯತೆ ನಮ್ಮದಾಗಿದೆ. > ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ, ಉರ್ದು ಶಾಲೆ ಕೆಪಿಎಸ್​ ಶಾಲೆಯ ಆವರಣದಲ್ಲೇ ಉರ್ದು ಶಾಲೆ ಇದೆ. ಶಾಲೆಯ ಕಾಂಪೌಂಡ್​ಗೆ ಹೊಂದಿಕೊಂಡು ಪೊಲೀಸ್​ ಠಾಣೆ ಇದೆ. ಆದರೂ ದುಷ್ಕರ್ಮಿಗಳ ಕಿರಿಕಿರಿ ಮಿತಿಮೀರಿದೆ. ಶಾಲೆಗೆ ಭೇಟಿ ನೀಡಿ, ತಹಸೀಲ್ದಾರ್​ ಮತ್ತು ಪೊಲೀಸ್​ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸುತ್ತೇನೆ. > ಎನ್​.ಎಸ್​.ಸುಧಾಕರ್​, ಕೊರಟಗೆರೆ ೇತ್ರ ಶಿಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net