ಉರುಳಿಗೆ ಸಿಲುಕಿ ಚಿರತೆ ಸಾವು

MDG cheetha
ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಕಾಫಿ ತೋಟದಲ್ಲಿ ಉರುಳಿಗೆ ಸಿಲುಕಿದ ಚಿರತೆ.
Published on

ಮೂಡಿಗೆರೆ: ಬಾಳೂರು ಸಮೀಪದ ಕಾಫಿ ತೋಟದಲ್ಲಿ ಕಾಡುಹಂದಿ ಬೇಟೆಗೆಂದು ಬೇಟೆಗಾರರು ಕಟ್ಟಿದ್ದ ಉರುಳಿಗೆ ಚಿರತೆ ಸಿಲುಕಿ ಸಾವನ್ನಪ್ಪಿದೆ. ಉರುಳಿನಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದ ಚಿರತೆಯನ್ನು ರಕ್ಷಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಪ್ರಯತ್ನ ವಿಫಲವಾಯಿತು.

ಉರುಳಿಗೆ ಚಿರತೆ ಸಿಲುಕಿರುವ ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ಚರಣ್ ಮತ್ತು ಸಿಬ್ಬಂದಿ ಭೇಟಿ ನೀಡಿ ಚಿರತೆಯನ್ನು ರಕ್ಷಿಸಲು ಶಿವಮೊಗ್ಗದಿಂದ ಅರವಳಿಕೆ ತಜ್ಞರನ್ನು ಕರೆಸಿದರು. ಅರವಳಿಕೆ ನೀಡಿ ಅರಣ್ಯಾಧಿಕಾರಿಗಳ ಕೈಗೆ ಸಿಗುವವರೆಗೆ ಜೀವಂತವಾಗಿದ್ದ ಚಿರತೆ ಚಿಕಿತ್ಸೆ ನೀಡುವ ವೇಳೆ ಸಾವನ್ನಪ್ಪಿತು. ಕಾಡು ಹಂದಿಗೆಂದು ಉರುಳು ಕಟ್ಟಿದ್ದ ಬೇಟೆಗಾರರ ಬಂಧನಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net