ಉರುಳಿಗೆ ಸಿಲುಕಿ ಚಿರತೆ ಸಾವು

8mdg1A web
Published on

ಮೂಡಿಗೆರೆ: ಪಟ್ಟಣದ ಕೊಲ್ಲಿಬೈಲ್ ಸಮೀಪ ಪಾಳುಬಿದ್ದಿರುವ ತೋಟದಲ್ಲಿ ಸೋಮವಾರ ರಾತ್ರಿ ಹಂದಿ ಬೇಟೆಗೆ ಹಾಕಿದ್ದ ಉರುಳಿಗೆ ಚಿರತೆ ಸಿಲುಕಿ ಸಾವಿಗೀಡಾಗಿದೆ. ಮೂರು ವರ್ಷ ಪ್ರಾಯದ ಚಿರತೆ ಉರುಳಿಗೆ ಸಿಲುಕಿ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಮೃತಪಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ರಾತ್ರಿಯೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಮಂಗಳವಾರ ಮೂಡಿಗೆರೆ ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಕ್ರಿಯೆ ನಡೆಸಿದ್ದಾರೆ. ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ತಾಲೂಕಿನಲ್ಲಿ ಹುಲಿ, ಚಿರತೆ ಇರಲಿಲ್ಲ. ಇವು ಎಲ್ಲಿಂದ ಬಂದವು ಎಂಬುದು ತಿಳಿಯದಾಗಿದೆ. ತಾಲೂಕಿನ ಅನೇಕ ಕಡೆ ಹುಲಿ, ಚಿರತೆ ದಾಳಿಗೆ ಜಾನುವಾರುಗಳು ಬಲಿಯಾಗಿವೆ. ಕೂಲಿ ಕಾರ್ವಿುಕರು ತೋಟ, ಗದ್ದೆಗಳಲ್ಲಿ ಕೆಲಸ ಮಾಡಲು ಭಯಬೀತರಾಗಿದ್ದಾರೆ. ಮನುಷ್ಯರ ಮೇಲೆ ದಾಳಿ ಮಾಡುವ ಮುನ್ನ ಅರಣ್ಯ ಇಲಾಖೆ ಹುಲಿ, ಚಿರತೆಗಳನ್ನು ಪತ್ತೆ ಹಚ್ಚಿ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net