

ಚಾಮರಾಜನಗರ: ನಗರದ ಜಿಲ್ಲಾ ವಕ್ಫ್ ಮಂಡಳಿ ಕಚೇರಿ ವತಿಯಿಂದ ಗುರುವಾರ ಪದಾಧಿಕಾರಿಗಳಿಗೆ ಉಮ್ಮಿದ್ ಪೋರ್ಟಲ್ ಬಗ್ಗೆ ಒಂದು ದಿನದ ಅರಿವು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಾಗಾರದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ಆಸ್ಿ ಖಾನ್ ಮಾತನಾಡಿ, ಕೇಂದ್ರ ಸರ್ಕಾರದಿಂದ ನೂತವಾಗಿ ಜಾರಿ ಮಾಡಿರುವ ಉಮ್ಮೀದ್ ಪೋರ್ಟಲ್ ಮೂಲಕ ವಕ್ಫ್ ಆಸ್ತಿಯನ್ನು ಕ್ರಮಬದ್ಧವಾಗಿ ನೊಂದಣಿ ಮಾಡಲು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಮಂಡಳಿ ಅಧ್ಯಕ್ಷ ಸೈಯದ್ ಇರ್ಷಾದ್‌ವುಲ್ಲಾ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಸೈಯದ್ ಕಲಾಂ ಉಲ್ಲಾ, ಮಹಮ್ಮದ್ ಜಿಯಾವುಲ್ಲಾ, ಮಹಮ್ಮದ್ ಅಫ್ಜಲ್ ಶರ್ೀ, ತೌವಾಬ್ ಬೇಗ್, ರೂಮಾನ್ ಬೇಗ್ ಮತ್ತು ಇತರರು ಹಾಜರಿದ್ದರು.