ಉಮಾಕಾಂತಗೆ ಹಾಪ್ ಕಾಮ್ಸ್ ಸಾರಥ್ಯ

hopcoms
Published on

ಬೀದರ್: ಜಿಲ್ಲಾ ತೋಟಗಾರಿಕೆ ಉತ್ಪನ್ನಗಳ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್ ಕಾಮ್ಸ್) ಅಧ್ಯಕ್ಷರಾಗಿ ಉಮಾಕಾಂತ ಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಮಹ್ಮದ್ ಹುಸೇನ್ ಅವಿರೋಧ ಆಯ್ಕೆಯಾಗಿದ್ದಾರೆ.

ನಗರದ ಅಂಬೇಡ್ಕರ್ ವೃತ್ತದ ಹತ್ತಿರದ ತೋಟಗಾರಿಕೆ ಕಚೇರಿ ಆವರಣದ ಹಾಪ್ ಕಾಮ್ಸ್ ಕಚೇರಿಯಲ್ಲಿ ಮಂಗಳವಾರ ಚುನಾವಣೆ ಜರುಗಿತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ವೆಂಕಟ ಸಜ್ಜನ್ ಅವರು ಅವಿರೋಧ ಆಯ್ಕೆ ಘೋಷಿಸಿದರು. ಮುಂದಿನ ಐದು ವರ್ಷದ ಅವಧಿಗಾಗಿ ಚುನಾವಣೆ ನಡೆದಿದೆ.

ಚುನಾವಣೆ ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ಶಾಲಿವಾನ್ ಪಾಟೀಲ್, ವೈಜಿನಾಥ ಗುಲಾಬೆ, ಜಾಫರ್ ಕರೀಮ್ಸಾಬ್, ವಿಠಲ ಜಟಿಂಗಪ್ಪ, ಬಸವರಾಜ ವಿಶ್ವನಾಥ, ನರಸಪ್ಪ ಮಲ್ಲಪ್ಪ, ಗುರುನಾಥರೆಡ್ಡಿ, ಸುಮಂಗಲಾ ವಿಶ್ವನಾಥ, ಮೀನಾಕ್ಷಿ ಶಿವಶಂಕರ, ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ನಿಲಾಂಜನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net