ಉಭಯ ಜಗದ್ಗುರುಗಳು ದೇಗುಲಗಳಿಗೆ ಭೇಟಿ

sri swamijo
ಶೃಂಗೇರಿ ನರಸಿಂಹವನದ ಗುರುನಿವಾಸದಲ್ಲಿ ಗುರುವಾರ ಚಾತುರ್ಮಾಸ್ಯ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ನಡೆದುಕೊಂಡು ಈಶ್ವರಗಿರಿಗೆ ತೆರಳಿದರು.
Published on

ಶೃಂಗೇರಿ: ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಆಷಾಢ ಮಾಸದ ಹುಣ್ಣಿಮೆ ದಿನ ಜು.10 ರಂದು ನರಸಿಂಹವನದ ಗುರುನಿವಾಸದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದಾರೆ. 51ನೇ ವರ್ಷದ ಚಾತುರ್ಮಾಸ್ಯವನ್ನು ಶ್ರೀ ಭಾರತೀತೀರ್ಥ ಸ್ವಾಮೀಜಿ ಕೈಗೊಳ್ಳಲಿದ್ದಾರೆ.

ಚಾತುರ್ಮಾಸ್ಯ ವ್ರತದ ಪೂರ್ವಭಾವಿಯಾಗಿ ಬುಧವಾರ ಜಗದ್ಗುರುಗಳು ಶ್ರೀ ಶಾರದಾಂಬಾ, ಶ್ರೀ ಶಂಕರಾಚಾರ್ಯ, ತೋರಣಗಣಪತಿ, ಶ್ರೀ ವಿದ್ಯಾಶಂಕರ ದೇವಾಲಯ ಹಾಗೂ ಈಶ್ವರಗಿರಿಗೆ ಭೇಟಿ ನೀಡಿ ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಶ್ರೀ ಭವಾನಿ ಅಮ್ಮನವರು, ಸ್ತಂಭ ಗಣಪತಿಗೆ ಪೂಜೆ ಸಲ್ಲಿಸಿದರು.

ಅನಾದಿ ಕಾಲದಿಂದಲೂ ಗುರುಪೂರ್ಣಿಮೆ ದಿನ ಗುರುಪರಂಪರೆಗೆ ಪೂಜೆ ಸಲ್ಲಿಸಲಾಗುತ್ತದೆ. ಯತಿವರ್ಯರು ಗುರುವಾರ ವ್ಯಾಸಪೂಜೆ ಸಲ್ಲಿಸಿದ ಬಳಿಕ ಚಾತುರ್ಮಾಸ್ಯ ವ್ರತದ ಧಾರ್ಮಿಕವಿಧಿಗಳು ನೆರವೇರಲಿವೆ. ಸೆ.7ರಂದು ಚಾತುರ್ಮಾಸ್ಯ ವ್ರತ ಮುಕ್ತಾಯಗೊಳ್ಳಲಿದೆ. ಚಾತುರ್ಮಾಸ್ಯ ಸಂದರ್ಭದಲ್ಲಿ ನಾನಾ ಪ್ರಾಂತ್ಯಗಳಿಂದ ಆಗಮಿಸುವ ಸದ್ಭಕ್ತರು ಯತಿವರ್ಯರ ಅನುಗ್ರಹ ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net