ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ವೈಭವ

Oplus_16908290
ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದಲ್ಲಿ ಮಂಗಳವಾರ ಬಾಳೆಹೊನ್ನೂರ ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಹಾಗೂ ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರ ಅಡ್ಡಪಲ್ಲಕಿ ಉತ್ಸವ ಅಪಾರ ಭಕ್ತಾಧಿಗಳ ಮಧ್ಯೆ ಅತ್ಯಂತ ಸಡಗರ ಸಂಭ್ರಮ ಹಾಗೂ ವೈಭವದಿಂದ ಜರುಗಿತು.
Published on

ಹುಮನಾಬಾದ್: ಹುಡಗಿ ಗ್ರಾಮದ ಶ್ರೀ ರಂಭಾಪುರಿ ಶಾಖಾ ಮಠವಾದ ಕಟ್ಟಿಮನಿ ಹಿರೇಮಠ ಸಂಸ್ಥಾನದಲ್ಲಿ ಮಂಗಳವಾರ ಸಂಜೆ ಶ್ರೀ ದಿಗಂಬರ ಕರಿಬಸವೇಶ್ವರ ಜಾತ್ರಾ ಮಹೋತ್ಸವ, ಮಠದ ಪೀಠಾಧಿಪತಿ ಶ್ರೀ ವಿರೂಪಾಕ್ಷ ಶಿವಾಚಾರ್ಯರ ಅಮೃತ ಮಹೋತ್ಸವ ಹಾಗೂ ನೂತನ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಬಾಳೆಹೊನ್ನೂರ ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಹಾಗೂ ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯರ ಅಡ್ಡಪಲ್ಲಕಿ ಉತ್ಸವ ಅಪಾರ ಭಕ್ತಾಧಿಗಳ ಮಧ್ಯೆ ಅತ್ಯಂತ ಸಡಗರ ಸಂಭ್ರಮ ಹಾಗೂ ವೈಭವದಿಂದ ಜರುಗಿತು.

ರಂಭಾಪುರಿ ಹಾಗೂ ಕೇದಾರ ಶ್ರೀಗಳು ಪುರ ಪುರವೇಶ ಆಗುತ್ತಿದ್ದಂತೆ ಹಲವಾರು ಶ್ರೀಗಳು ಹಾಗೂ ಭಕ್ತರು ಅದ್ದೂರಿ ಸ್ವಾಗತ ಕೋರಿದರು. ಗ್ರಾಮದ ಹನುಮಾನ ಮಂದಿರದಿಂದ ಪ್ರಮುಖ ರಸ್ತೆಯ ಮೂಲಕ ಸಮಾರಂಭದ ಸ್ಥಳವಾದ ಶ್ರೀ ವೆಂಕಮ್ಮ ದೇವಸ್ಥಾನದ ಸಭಾ ಮಂಟದವರೆಗೆ ಭವ್ಯ ಮೆರಣಿಗೆ ಜರುಗಿತು. ಮೆರಗಣಿಗೆ ಉದ್ದಕ್ಕೂ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಭಜನೆ, ಶಾಲಾ ಮಕ್ಕಳಿಂದ ಲೇಜಿಮï ಸೇರಿ ಸಾಂಸ್ಕೃತಿಕ ಕಲಾ ತಂಡಗಳು ಮೆರಗು ಹೆಚ್ಚಿಸಿದವು. ಭಕ್ತರ ಜೈಕಾರ ಮೊಳಗಿದವು. ಗ್ರಾಮದೆಲ್ಲಡೆ ರಂಗೋಲಿ ಬಿಡಿಸಿ ತಳಿರುತೋಣದಿಂದ ಶೃಂಗಾರಿಸಲಾಗಿದ್ದು, ಹಬ್ಬದ ಸಂಭ್ರಮ ಕಂಡುಬಂದಿತ್ತು.

ಸ್ಥಳೀಯ ಮಠದ ಪೀಠಾಧಿಪತಿ ಶ್ರೀ ವಿರೂಪಾಕ್ಷ ಶಿವಾಚಾರ್ಯ ರು, ತಡೋಳದ ಶ್ರೀ ರಾಜೇಶ್ವರ ಶಿವಾಚಾರ್ಯರು, ಹುಮನಾಬಾದ್‌ನ ಹಿರೇಮಠದ ಶ್ರೀ ರೇಣುಕ ಗಂಗಾಧರ ಶಿವಾಚಾರ್ಯರು, ಹಲಬರ್ಗಾದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಕಲ್ಲೂರದ ಶ್ರೀ ಮೃತುಂಜಯ ಶಿವಾಚಾರ್ಯ ರು, ಸದಲಾಪೂರದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ರಾಜೇಶ್ವರದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶ್ರೀ ನಾಗಯ್ಯ ದೇವರು ಸೇರಿ ವಿವಿಧ ಮಠಗಳ ಶ್ರೀಗಳು, ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಸಮಿತಿ ಕಾರ್ಯದರ್ಶಿ ಸೋಮನಾಥ ಪಾಟೀಲï, ನಾಗೇಶ ಒಳದೊಡ್ಡಿ, ಶರಣಪ್ಪ ಮೂಲಗಿ, ಮಹಾಂತೇಶ ನಂದಿ, ರಾಜಶೇಖರ ಸಿದ್ದಣ್ಣ, ಕಾಶಿನಾಥ ಶಿವಶೇಟ್ಟಿ, ರಾಮರೆಡ್ಡಿ, ಶಿವಾನಂದ ಉಳಗಡ್ಡಿ, ಬಸವರಾಜ ಮುತ್ತಂಗಿ, ಬಾಬುರಾವ ಪಾಟೀಲ್, ಶರಣಯ್ಯ ಸ್ವಾಮಿ, ಗುರು ಮುಗುಳಿ, ದಯಾನಂದ ಸಿಂಧನಕೇರಾ, ಸಂತೋಷ ಶಿವಶೆಟ್ಟಿ, ಗೌರಿಶಂಕರ ಪರ್ತಾಪುರ, ಶಿವಸಾಗರ ಮಲ್ಲಶೆಟ್ಟಿ, ಅನಿಲ ಕನಶೆಟ್ಟಿ, ಮಲ್ಲಿಕಾರ್ಜುನ ಮೂಲಗಿ, ಬಸವರಾಜ ನಂದಿ, ಉಮೇಶ ನಂದಿ, ಬಸವರಾಜ ಶಿವರೆಡ್ಡಿ, ವಿಠಲ ಶಿವರೆಡ್ಡಿ ಸೇರಿದಂತೆ ಗ್ರಾಮದ ಪ್ರಮುಖರು, ಸುತ್ತಮೂತ್ತಲ್ಲಿನ ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net