ಉಪ್ಪಾರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮತ್ತೆ ಕಳ್ಳತನ

IMG20221231152253
Published on

ನಾಗಮಂಗಲ: ಪಟ್ಟಣದ ಉಪ್ಪಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕಳ್ಳತನವಾಗಿದ್ದು, ಕಳೆದ ಒಂದು ತಿಂಗಳ ಅಂತರದಲ್ಲಿ ಮೂರನೇ ಬಾರಿಗೆ ಕಳ್ಳತನವಾಗಿದೆ.

ಶಾಲೆಯ ಕ್ರೀಡಾ ಮತ್ತು ಪ್ರಯೋ ಶಾಲಾ ಕೊಠಡಿಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು, ಕಬ್ಬಿಣದ ಗುಂಡುಗಳು ಸೇರಿದಂತೆ ಇನ್ನಿತರ ಕಬ್ಬಿಣದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಕಳೆದ ಡಿ.12 ರಂದು ಶಾಲೆಯ ಅಡುಗೆ ಮನೆಯ ಬಾಗಿಲು ಮುರಿದು ಮೂರು ಭರ್ತಿಯಾಗಿದ್ದ ಮತ್ತು ಎರಡು ಖಾಲಿ ಸಿಲಿಂಡರ್ ಸೇರಿದಂತೆ ಸಣ್ಣಪುಟ್ಟ ವಸ್ತುಗಳನ್ನು ಕಳವು ಮಾಡಿದ್ದ್ದ ಕಳ್ಳರು, ಡಿ.18 ರಂದು ಶಾಲೆಯ ಕೊಠಡಿ ಒಳಗೆ ಇಡಲಾಗಿದ್ದ ಡೆಸ್ಕ್‌ಗಳ ಕಬ್ಬಿಣಗಳನ್ನು ಮುರಿದುಕೊಂಡು ಹಲಗೆಗಳನ್ನು ಬಿಸಾಡಿ ಪರಾರಿಯಾಗಿದ್ದಾರೆ. ಇದೀಗ ಮೂರನೇ ಬಾರಿಗೆ ಕೃತ್ಯವೆಸಗಿದ್ದಾರೆ.

ಘಟನೆ ಸಂಬಂಧ ಕ್ಷೇತ್ರಶಿಕ್ಷಣಾಧಿಕಾರಿ ಸುರೇಶ್ ಶಾಲೆಗೆ ಭೇಟಿ ನೀಡಿ ಕಳ್ಳತನ ನಡೆದಿರುವ ಕೊಠಡಿಯನ್ನು ಪರಿಶೀಲಿಸಿದರು. ಮುಖ್ಯಶಿಕ್ಷಕರಿಂದ ಅಗತ್ಯ ಮಾಹಿತಿ ಪಡೆದರು. ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಸಹ ಹಾಜರಿದ್ದರು. ಮುಖ್ಯ ಶಿಕ್ಷಕರು ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net