ಉಪ್ಪಾರ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಲಿ

4-KGL-2,,,,
filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 40;
Published on

ಯಳಂದೂರು : ಭಗೀರಥರು ಸಕಲರ ಉದ್ಧಾರಕ್ಕೆ ಗಂಗೆಯನ್ನು ಭೂಮಿಗೆ ತರಲು ಎಷ್ಟು ಪ್ರಯತ್ನಪಟ್ಟರೋ ಅದೇ ಪ್ರಯತ್ನವನ್ನು ಉಪ್ಪಾರ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಯತ್ನಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಪೈಪೋಟಿಯುಕ್ತ ಜೀವನವಾಗಿದೆ. ನಾವು ಎಲ್ಲಿ ಹೋದರೂ ಸವಾಲಗಳನ್ನು ಸ್ವೀಕರಿಸಲು ಸಿದ್ಧರಾಗಬೇಕಿದೆ. ಶಿಕ್ಷಣದಿಂದ ಎಲ್ಲವನ್ನೂ ಗೆಲ್ಲುವ ಛಲ ನಮಗೆ ಬರುತ್ತದೆ. ಉಪ್ಪಾರ ಸಮುದಾಯ ಶ್ರಮದಾಯಕ ಸಮುದಾಯವಾಗಿದೆ. ಇವರು ಪ್ರಯತ್ನಪಟ್ಟರೆ ಏನು ಬೇಕಾದರೂ ಸಾಧಿಸುತ್ತಾರೆ. ಇದಕ್ಕೆ ದೊಡ್ಡ ನಿದರ್ಶನ ಭಗೀರಥ ಮಹರ್ಷಿಯಾಗಿದ್ದಾರೆ ಎಂದರು.

ಸಮುದಾಯದ ಮಕ್ಕಳು ಹೆಚ್ಚು ವಿದ್ಯಾವಂತರಾಗಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ರಾಜಕೀಯವಾಗಿ ನಮ್ಮ ಜಿಲ್ಲೆಯಲ್ಲಿ ಈ ಸಮುದಾಯ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆರ್ಥಿಕವಾಗಿ ಇವರು ಸಬಲರಾಗಬೇಕು. ಮೌಢ್ಯಗಳಿಂದ ದೂರವಿರಬೇಕು. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 33 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ. ನನ್ನ ಗೆಲುವಿನಲ್ಲಿ ಈ ಸಮುದಾಯದ ಪಾತ್ರ ಹೆಚ್ಚಾಗಿದೆ. ನಾನು ಇದಕ್ಕೆ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.

ಮುಖ್ಯ ಭಾಷಣಕಾರ ಸಂತೆಮರಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಿಯಾಶಂಕರ್ ಮಾತನಾಡಿ, ಭಗೀರಥರ ವೃತ್ತಾಂತ ಹಾಗೂ ಪೌರಾಣಿಕ ಹಿನ್ನೆಲೆ ಹಾಗೂ ತಮ್ಮ ಸಮುದಾಯದ ಬಗ್ಗೆ ಬೆಳಕು ಚೆಲ್ಲಿದರು. ಪಪಂ ಅಧ್ಯಕ್ಷೆ ಲಕ್ಷ್ಮೀ ಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು, ಸದಸ್ಯರಾದ ಸುಶೀಲಾ ಪ್ರಕಾಶ್, ಮಹೇಶ್, ವೈ.ಜಿ.ರಂಗನಾಥ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಎಚ್.ವಿ ಚಂದ್ರು, ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಕಿನಕಹಳ್ಳಿ ಸಿದ್ದರಾಜು, ವೈ.ಎಸ್.ನಂಜಶೆಟ್ಟಿ, ಕಂದಹಳ್ಳಿ ನಂಜುಂಡಸ್ವಾಮಿ, ವೈ.ಕೆ.ಮೋಳೆನಾಗರಾಜು, ಕೆಸ್ತೂರು ನಾಗರಾಜು, ಸುರೇಶ್, ತಹಸೀಲ್ದಾರ್ ಬಸವರಾಜು, ಸಿಪಿಐ ಕೆ.ಶ್ರೀಕಾಂತ್, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಸಿದ್ದಪ್ಪಸ್ವಾಮಿ, ರೇಚಣ್ಣ ಇದ್ದರು.

ಅದ್ದೂರಿ ಮೆರವಣಿಗೆ ಪಟ್ಟಣದ ಷಡಕ್ಷರ ದೇವರ ಗದ್ದುಗೆಯ ಮುಂಭಾಗದಿಂದ ಸತ್ತಿಗೆ ಸೂರಿಪಾನಿ, ವಿವಿಧ ಕಲಾತಂಡಗಳು ಸೇರಿದಂತೆ ಬೆಳ್ಳಿ ರಥದಲ್ಲಿ ಮಹರ್ಷಿ ಭಗೀರಥರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಹೆಚ್ಚು ಕಳೆಕಟ್ಟಿತು. ಇದೇ ಸಂದರ್ಭದಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಉಪ್ಪಾರ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಯಳಂದೂರು ಪಟ್ಟಣದಲ್ಲಿ ಭಗೀರಥ ಭವನ ನಿರ್ಮಾಣಕ್ಕೆ ಜಾಗದ ಸಮಸ್ಯೆ ಈಗ ಬಗೆಹರಿದಿದೆ. ನನ್ನ ವಿಶೇಷ ಅನುದಾನದಡಿ 50 ಲಕ್ಷ ರೂ. ಮಂಜೂರು ಮಾಡಿದ್ದೇನೆ. ಕೊಳ್ಳೇಗಾಲದಲ್ಲೂ ಸಮುದಾಯವರು 30 ಸೆಂಟ್ ಜಾಗ ಖರೀದಿಸಿದ್ದಾರೆ. ಅವರಿಗೂ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದೇನೆ. ಅಲ್ಲದೆ ನನ್ನ ಕ್ಷೇತ್ರ ವ್ಯಾಪ್ತಿಯ ಅನೇಕ ಗ್ರಾಮಗಳ ಸಮುದಾಯ ಭವನಗಳಿಗೆ ಹಣ ನೀಡಲಾಗುವುದು. ಎ.ಆರ್.ಕೃಷ್ಣಮೂರ್ತಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net